ಸಿದ್ದರಾಮಯ್ಯ ಸರ್ಕಾರದ ದೊಡ್ಡ ಭರವಸೆ ಇಂದು ಜಾರಿಗೆ, ಎತ್ತಿನ ಹೊಳೆಗೆ ಚಾಲನೆ

Krishnaveni K

ಶುಕ್ರವಾರ, 6 ಸೆಪ್ಟಂಬರ್ 2024 (09:40 IST)
ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಅತೀ ದೊಡ್ಡ ಭರವಸೆ ಇಂದಿನಿಂದ ಜಾರಿಗೆ ಬರಲಿದೆ. ಎತ್ತಿನ ಹೊಳೆ ಯೋಜನೆ ಹಂತ 1 ಕ್ಕೆ ಇಂದು ಚಾಲನೆ ಸಿಗಲಿದೆ. ಗೌರಿ ಹಬ್ಬ ಶುಭ ಮುಹೂರ್ತದಲ್ಲಿ 7 ಜಿಲ್ಲೆಗಳಿಗೆ ಅನುಕೂಲವಾಗುವ ನೀರಾವರಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.

ಡಿಸಿಎಂ ಡಿಕೆ ಶಿವಕುಮಾರ್ ಇಂದು ಬೆಳಿಗ್ಗೆ ಪೂಜೆ ಸಲ್ಲಿಸುವ ಮೂಲಕ ಯೋಜನೆ ಯಶಸ್ವಿಯಾಗಲು ಪ್ರಾರ್ಥನೆ ನಡೆಸಿದ್ದಾರೆ. ಸಕಲೇಶಪುರದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ. ಹೆಬ್ಬನಬಳ್ಳಿಯಲ್ಲಿ ಬಾಗಿನ ಅರ್ಪಣೆ ಮಾಡಲಿದ್ದಾರೆ.

2010 ರಲ್ಲಿ ಎತ್ತಿನಹೊಳೆ ಯೋಜನೆ ಅನುಷ್ಠಾನದ ಪ್ರಸ್ತಾವನೆಯಾಗಿತ್ತು. 2014 ರಲ್ಲಿ ಯೋಜನೆಗೆ ಶಂಕು ಸ್ಥಾಪನೆಯಾಗಿತ್ತು. 2012 ರಲ್ಲಿ ಯೋಜನೆಗಾಗಿ 8323 ಕೋಡಿ ರೂ. ನೀಡಲು ಅನುಮೋದನೆ ನೀಡಲಾಗಿತ್ತು. 2027 ರಲ್ಲಿ ಯೋಜನೆ ಪೂರ್ತಿಗೊಳಿಸಲು ಸರ್ಕಾರ ನಿರ್ಧಾರ ಮಾಡಿದೆ.

ನೇತ್ರಾವತಿಯ ಉಪನದಿಗಳಾದ ಹೊಂಗಡಹಳ್ಳ, ಎತ್ತಿನಹೊಳೆ, ಕಾಢುಮನೆ, ಕೇರಿಹೊಳೆಯಿಂದ ನೀರು ಪೂರೈಕೆಯಾಗಲಿದೆ. ಈ ಯೋಜನೆಯಿಂದ ಹಾಸನ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಿಗೆ ನೀರು ಸಿಗುವಂತಾಗಲಿದೆ. ವಿಪಕ್ಷಗಳ ವಿರೋಧದ ನಡುವೆಯೂ ಈ ಯೋಜನೆ ಈಗ ಜಾರಿಗೆ ಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ