ಬೆಂಗಳೂರು: ಸೋನಿಯಾ ಗಾಂಧಿ ಅವರ ಮಾರ್ಗದರ್ಶನದ ಮೇರೆಗೆ ರಾಜ್ಯದಲ್ಲಿ ಜಾತಿ ಗಣತಿ ನಡೆಸಲಾಗುತ್ತಿದೆ. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಸೋನಿಯಾ ಧರ್ಮಕ್ಕೆ ಎಲ್ಲರನ್ನು ಸೇರಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ವಿಪಕ್ಷ ನ ನಾಯಕ ಆರ್ ಅಶೋಕ್ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಿಗೆ ಸ್ಪಷ್ಟತೆಯೇ ಇಲ್ಲ. ಜಾತಿ ತೆಗೆದಿದ್ದೇವೆ ಅಂತಾರೆ, ಕೆಲವು ಉಳಿಸಿಕೊಂಡಿದ್ದೇವೆ ಎನ್ನುತ್ತಾರೆ. ತೆಗೆದಿರುವ ಜಾತಿಗಳ ಹೆಸರು ಹೇಳಿದರೂ ಬರೆದುಕೊಳ್ಳುತ್ತೇವೆ ಎಂದಿದ್ದಾರೆ. ಈ ಗೊಂದಲ ಯಾಕೆ ಮೂಡಿಸಬೇಕು. ಈ ಮೂಲಕ ವಿವಿಧ ಜಾತಿ ಸಮುದಾಯಗಳಿಗೆ ಸಮೀಕ್ಷೆಯಿಂದ ಅಪಮಾನವಾಗುತ್ತಿದೆ ಎಂದು ದೂರಿದರು.
ಜಾತಿ ಸಮೀಕ್ಷೆ ಮಾಡುವ ಮೂಲಕ ಸರ್ಕಾರ ಹಿಂದೂ ಧರ್ಮ ಒಡೆಯುವ, ಅವಹೇಳನ ಮಾಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಅಜೆಂಡಾದಲ್ಲೇ ಹಿಂದೂ ವಿರೋಧಿ ನೀತಿಯಿದೆ. ಹೊಸದಾಗಿ 52 ಜಾತಿಗಳನ್ನು ಸೇರಿಸಿ ಗೊಂದಲ ಮಾಡಿದ್ದರು. ಎಲ್ಲದರ ಮುಂದೆ ಕ್ರಿಶ್ಚಿಯನ್ ಹೆಸರು ತಂದಿದ್ದಾರೆ. ಹೊಸ ಜಾತಿಯನ್ನು ಸೃಷ್ಟಿಸಿದ್ದು ಹೇಗೆ?
ಸಿದ್ದರಾಮಯ್ಯ ಅವರ ಅಧಿಕಾರ ಹೋಗುವ ಆತಂಕದಲ್ಲಿ ಸೋನಿಯಾ ಗಾಂಧಿಯನ್ನು ಓಲೈಸಲು ಕ್ರಿಶ್ಚಿಯನ್ ಹೆಸರು ತಳುಕು ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
. ಈಗ ಸಿದ್ದರಾಮಯ್ಯ ಏನು ಮಾಡಲು ಹೊರಟಿದ್ದಾರೋ ಇದು ಅಧಿಕೃತ ಅಲ್ಲ. ಈ ಸಮೀಕ್ಷೆ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಇದು ಇದು ಅಸಾಂವಿಧಾನಿಕ ಸಮೀಕ್ಷೆ ಎಂದು ವಾಗ್ದಾಳಿ ನಡೆಸಿದರು.