ಎಸ್ ಸಿ ಎಸ್ ಟಿ ಮೀಸಲಾತಿ 9ನೇ ಶೇಡ್ಯೂಲ್ ಗೆ ಸೇರಿಸುವಂತೆ ಕಾಂಗ್ರೆಸ್ ನಾಯಕರ ಒತ್ತಾಯ ಮಾಡ್ತಿರುವ ವಿಚಾರಕ್ಕೆ ಮಾತನಾಡಿದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು, ಮೀಸಲಾತಿ ಮಾನ್ಯತೆ ಕೇಂದ್ರ ಸರ್ಕಾರ ಕಳಿಸಿದ ತಕ್ಷಣ ಮಾಡಲ್ಲ.ಸಿದ್ದರಾಮಯ್ಯ ಅವರು ಆರ್ಟಿಕಲ್ 3 ಅಲ್ಲಿ ಶಿಫಾರ ಮಾಡಿದ್ದಾರೆ.ಹಿಮಾಚಲ ಕೂಡ ವರ್ಗೀಕರಣ ಮಾಡಲು ಶಿಫಾರಸ್ಸು ಮಾಡಲು ಕಳಿಸಿತ್ತು, ಆಂಧ್ರ, ರಾಜಸ್ತಾನ ಕೂಡ ಕಳಿಸಿತ್ತು.ತಮಿಳುನಾಡು ಕೂಡ ಕಳಿಸಿ, ಎಷ್ಟು ರಾಜ್ಯಗಳಲ್ಲಿ ವರ್ಗೀಕರಣ ಅವಶ್ಯಕತೆ ಇದೆ ಅಂತ ಕೇಂದ್ರ ನೋಡಬೇಕು.ದಕ್ಷಿಣ ಭಾರತ ಮತ್ತು ಉತ್ತರ ಭಾರತ ಶೋಶಿತ ವರ್ಗಗಳ ಬಗ್ಗೆ ಅಧ್ಯಯನ ಆಗಬೇಕಿದೆ.ವಿವಿಧ ಸಮಿತಿಗಳ ವರದಿ ತರಿಸಿಕೊಳ್ಳಲಾಗಿದೆ..ಎಲ್ಲಾ ವರದಿ ಹಾಗೂ ಸುಪ್ರೀಂ ಕೋರ್ಟ್ ತೀರ್ಪು ತರಿಸಿ ಕೊಂಡಿದ್ದಾರೆ.ನಮ್ಮ ಪ್ರಧಾನಿಗಳು ಮತ್ತು ಅಮಿತ್ ಶಾ ಅವರೇ ಇದರ ಬಗ್ಗೆ ವರದಿ ತರಿಸಿಕೊಳ್ತಿದ್ದಾರೆ.ಅವರೇ ಮೀಸಲಾತಿ 9ನೇ ಶೇಡ್ಯೂಲ್ ಗೆ ಸೇರಿಸಲು ನಿರ್ಧಾರ ಮಾಡ್ತಾರೆ ಇದರ ಜೊತೆಗೇನೇ ತುಷಾರ್ ಮೆಹ್ತಾ ಸಮಿತಿಗೆ ವರದಿ ಕೊಡಲು ಸೂಚಿಸಿದ್ದಾರೆ. ಆದರೆ ಸಿದ್ದರಾಮಯ್ಯ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಆ ರೀತಿ ದಿಕ್ಕು ತಪ್ಪಿಸೋ ಕೆಲಸ ಮಾಡಬೇಡಿ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ರು