ಆಪರೇಷನ್ ಮಾಡಿ ಕಮಲ ಕೋಮಾದಲ್ಲಿದೆ ಎಂದ ಸಿದ್ದರಾಮಯ್ಯ
‘ಮಾನ್ಯ ಬಿಎಸ್ ವೈ ಅವರು ಸರ್ಕಾರ ಬೀಳುತ್ತೆ ಎಂಬ ಹೇಳಿಕೆ ನೀಡಿದ್ದಾರೆ. ಈಗಾಗಲೇ ಹಲವಾರು ಬಾರಿ ಆಪರೇಷನ್ ಗೆ ಒಳಗಾಗಿ ಕರ್ನಾಟಕದಲ್ಲಿ ಕಮಲ ಕೋಮಾದಲ್ಲಿದೆ. ಮತ್ತೆ ಆಪರೇಷನ್ ಕಮಲಕ್ಕೆ ಕೈ ಹಾಕುವ ಕೆಟ್ಟ ಸಾಹಸ ಮಾಡಬೇಡಿ. ವಿರೋಧ ಪಕ್ಷವಾಗಿ ಸದಾ ಬಿಜೆಪಿ ನಮ್ಮ ಮುಂದಿರಬೇಕು. ಇದೇ ಪ್ರಜಾಪ್ರಭುತ್ವದ ಸೌಂದರ್ಯ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಜಮಖಂಡಿಯ ವಿವಿಧೆಡೆ ರೋಡ್ ಶೋ, ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿ ಸಮಾಲೋಚನೆಯನ್ನೂ ನಡೆಸಿದ್ದಾರೆ.