ಸ್ವಕ್ಷೇತ್ರ ಬಾದಾಮಿಯಲ್ಲಿ ಸಿದ್ದರಾಮಯ್ಯ ಟೂರ್
ಸದ್ಯಕ್ಕೆ ಸಮ್ಮಿಶ್ರ ಸರ್ಕಾರದ ಕೆಲಸದ ಒತ್ತಡಗಳು ಕಡಿಮೆಯಿರುವ ಕಾರಣ ಜುಲೈ 18 ರಿಂದ ಬಾದಾಮಿ ಪ್ರವಾಸ ಮಾಡಲಿದ್ದಾರೆ. ಈ ವೇಳೆ ಇಲ್ಲಿನ ಸಮಸ್ಯೆಗಳು, ಪರಿಹಾರದ ಕುರಿತು ಸಮಾಲೋಚನೆ ಅಧಿಕಾರಿಗಳೊಂದಿಗೆ ನಡೆಸಲಿದ್ದಾರೆ.
ಈ ಹಿಂದೆಯೂ ಸಿದ್ದರಾಮಯ್ಯ ಹಲವು ಬಾರಿ ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದ್ದರು. ಅದರಂತೆ ಅಲ್ಲಿ ತಿಂಗಳಿಗೊಮ್ಮೊಯಾದರೂ ಅಲ್ಲಿಯೇ ಇದ್ದು, ಜನರ ಸಮಸ್ಯೆಗಳನ್ನು ಆಲಿಸಲು ತೀರ್ಮಾನಿಸಿದ್ದಾರೆ. ಸಮಾಲೋಚನೆ ಬಳಿಕ ಜುಲೈ 19 ರ ರಾತ್ರಿ ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸಾಗಲಿದ್ದಾರೆ.