ಗೌರಿ ಹತ್ಯೆ ಆರೋಪಿ ಪರಶುರಾಮ್ ಬಳಿ ಕೃತ್ಯದ ಮರುಸೃಷ್ಟಿ ಮಾಡಿಸಿ ಎಸ್ಐಟಿ
ಈ ವೇಳೆ ಘಟನೆ ನಡೆದಿದ್ದು ಹೇಗೆ ಎಂಬುದನ್ನು ಆರೋಪಿ ಮಾಡಿ ತೋರಿಸಿದ್ದಾನೆ ಎನ್ನಲಾಗಿದೆ. ಗೌರಿ ಕಾರಿನಿಂದ 5 ರಿಂದ 6 ಅಡಿ ದೂರದಲ್ಲಿ ಕಾರು ನಿಲ್ಲಿಸಿ 2 ಅಡಿ ದೂರದಿಂದ ಗುಂಡು ಹಾರಿಸಿರುವುದಾಗಿ ಆರೋಪಿ ವಿವರಿಸಿದ್ದಾನೆ. ಗುಂಡು ಹಾರಿಸಿದ ಮೇಲೆ ಬೈಕ್ ಹತ್ತಿ ಹೊರಟ ಮೇಲೆ ಏನು ನಡೆಯಿತು ಎಂಬುದು ತನಗೆ ಗೊತ್ತಾಗಲಿಲ್ಲ ಎಂದು ಆತ ಹೇಳಿದ್ದಾನೆ.
ಈ ನಡುವೆ ಇದೇ ಆರೋಪಿಗಳು ಇನ್ನೊಬ್ಬ ವಿಚಾರವಾದಿ ಪ್ರೊ. ಕೆಎಸ್ ಭಗವಾನ್ ಹತ್ಯೆಗೂ ಸಂಚು ರೂಪಿಸಿತ್ತು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಈಗಾಗಲೇ ಭಗವಾನ್ ಹತ್ಯೆಗೆ ಸುಫಾರಿ ಕೊಡಲಾಗಿತ್ತು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.