ಕಂಟೇನರ್‌ ಬಿದ್ದು ಕಾರು ಅಪ್ಪಚ್ಚಿಯಾಗಿ ಆರು ಮಂದಿ ಸಾವು: 10 ಕಿಮೀವರೆಗೆ ಟ್ರಾಫಿಕ್ ಜಾಮ್‌

Sampriya

ಶನಿವಾರ, 21 ಡಿಸೆಂಬರ್ 2024 (16:23 IST)
Photo Courtesy X
ನೆಲಮಂಗಲ: ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ಇಂದು ನಡೆದ ಅಪಘಾತದಿಂದಾಗಿ ತುಮಕೂರು ರಸ್ತೆಯಲ್ಲಿ ಸುಮಾರು 10 ಕಿಮೀ ನಷ್ಟು ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವಿನ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ದುರ್ಮಣಕ್ಕೀಡಾಗಿದ್ದಾರೆ.

ಅಪಘಾತದ ವೇಳೆ ಕಂಟೇನರ್‌ ಕಾರಿನ ಮೇಲೆ ಬಿದ್ದ ಪರಿಣಾಮ, ಕಾರು ಸಂಪೂರ್ಣ ಅಪ್ಪಚ್ಚಿಯಾಗಿತ್ತು. ಇದರಿಂದ ಕಾರು ಹೊರತೆಗೆಯಲು ಪೊಲೀಸರು ಹರಸಾಹಸಪಟ್ಟರು.

ಹೆವಿ ಲೋಡ್ ಇರುವ ಕಂಟೇನರ್‌ ಮೇಲೆತ್ತಲು ಲಾರಿ ಬೆಲ್ಟ್‌, ಚೈನ್‌ಗಳನ್ನ ತರಿಸಲಾಗಿತ್ತು. ಕೊನೆಗೆ ಹರಸಾಹಸ ಪಟ್ಟು ಮೂರು ಕ್ರೇನ್‌ಗಳ ಸಹಾಯದಿಂದ ಕಂಟೇನರ್‌ ಮೇಲೆತ್ತಿ ಕಾರನ್ನು ಹೊರತೆಗೆದರು.

ಕಾರಿನ ಮೇಲೆಯೇ ಕಂಟೇನರ್‌ ಬಿದ್ದ ಪರಿಣಾಮ ಕಾರಿನಲ್ಲಿದ್ದ ವಿಜಯಪುರ ಮೂಲದ ಚಂದ್ರ ಯಾಗಪ್ಪ ಗೋಳ್ (48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯ (6)) ಸಾವನ್ನಪ್ಪಿದ್ದಾರೆ. ವಾರಾಂತ್ಯ ಪ್ರವಾಸ ಕೈಗೊಂಡಿದ್ದ ಕುಟುಂಬ ಮಸಣ ಸೇರಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ