ಬೆಂಗಳೂರಿನಂತಾಗಿದೆ ಮಂಗಳೂರು: ಟ್ರಾಫಿಕ್‌ನಲ್ಲಿ ಸುಸ್ತು

Sampriya

ಶನಿವಾರ, 12 ಅಕ್ಟೋಬರ್ 2024 (19:51 IST)
Photo Courtesy X
ಮಂಗಳೂರು: ಮೈಸೂರು ದಸರಾದಷ್ಟೇ ಪ್ರಖ್ಯಾತಿಯನ್ನು ಮಂಗಳೂರು ದಸರಾ ಹೊಂದಿದೆ. ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ.

ಭಕ್ತರನ್ನು ಬೆಳಕಿನ ಚಿತ್ತಾರದಿಂದ ಸ್ವಾಗತಿಸಲು ನಗರವನ್ನು ದೀಪಾಲಂಕಾರ ಮಾಡಲಾಗುತ್ತದೆ. ಪ್ರತಿನಿತ್ಯ ಲಕ್ಷದಷ್ಟು ಮಂದಿ ನವದುರ್ಗೆಯರ ದರ್ಶನವನ್ನು ಪಡೆಯುತ್ತಾರೆ. ಈ ಸಂದರ್ಭದಲ್ಲಿ ಬೆಂಗಳೂರಿನಂತೆ ಟ್ರಾಫಿಕ್ ಆಗುತ್ತದೆ.

ಇಂದು ಮಂಗಳೂರು ದಸರಾ ಪರಿಣಾಮವಾಗಿ ಕಿಲೋ ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ಜನರು ಗಂಟೆಗಟ್ಟಲೆ ಪರದಾಡಿದ್ದಾರೆ. ನವದುರ್ಗೆಯರ ಮೆರವಣಿಗೆ ಹಿನ್ನೆಲೆ ಮಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಪ್ರಯಾಣಿಕರು ಅನುಭವಿಸಿದ್ದಾರೆ.

ತಾವು ತೆರಳಬೇಕಾದ ಸ್ಥಳಕ್ಕೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗದೆ ಪ್ರಯಾಣಿಕರು ಕಿರಿಕಿರಿ ಅನುಭವಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ