ಜಮ್ಮು-ಕಾಶ್ಮೀರಕ್ಕೆ ಹಿಮದ ಹೊದಿಕೆ: ಹಿಮಕುಸಿತ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಗುರುವಾರ, 6 ಜನವರಿ 2022 (20:57 IST)
ಮತ್ತು ಕಾಶ್ಮೀರ ಹಿಮವೃತವಾಗಿದ್ದು, ಹಿಮಕುಸಿತ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಜನವರಿ 8 ರವರೆಗೆ ಹಿಮ ಬೀಳುವ ನಿರೀಕ್ಷೆ ಇದೆ. ಕಾಶ್ಮೀರದ ಎತ್ತರದ ಪ್ರದೇಶಗಳಲ್ಲಿ ಮಧ್ಯಮದಿಂದ ಭಾರೀ ಹಿಮಪಾತವಾಗುತ್ತಿದೆ, ಹಿಮಕುಸಿತ ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಹೆಚ್ಚು ಹಿಮ ಬೀಳುತ್ತಿರುವ ಪ್ರದೇಶಗಳಿಗೆ ಹೋಗುವುದನ್ನು ನಿಲ್ಲಿಸುವಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ ಎಂದು ಹವಾಮಾನ ಇಲಾಖೆ.
ಹಿಮದಿಂದಾಗಿ ಜನರ ಓಡಾಟಕ್ಕೆ ತೊಂದರೆ, ವಸ್ತುಗಳನ್ನು ಸಾಗಿಸುವುದು ಕಷ್ಟವಾಗಿದೆ.
ವೆಚ್ಚ-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಹಲವು ರಸ್ತೆಗಳ ಮೇಲೆ ಬೆಟ್ಟಗಳಿಂದ ಕಲ್ಲು, ಮಣ್ಣು ಕುಸಿದಿದ್ದು, ಸಂಚಾರ ಅಸಾಧ್ಯವಾಗಿದೆ.