ಸೂಕಿಗೆ 5 ವರ್ಷ ಜೈಲು ಶಿಕ್ಷೆ

ಗುರುವಾರ, 28 ಏಪ್ರಿಲ್ 2022 (19:52 IST)
ಮಿಲಿಟರಿ ಆಡಳಿತವಿರುವ ಮ್ಯಾನ್ಮಾರ್‌ ನ್ಯಾಯಾಲಯ ದೇಶದ ಮಾಜಿ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿದೆ. ಈ ಸಂಬಂಧ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಸೇನೆ ಸೂಕಿ ಬೆಂಬಲಿತ ಸರ್ಕಾರವನ್ನು ಪದಚ್ಯುತಗೊಳಿಸಿ, ಆಡಳಿತವನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಸೂಕಿ, ಉನ್ನತ ರಾಜಕೀಯ ಸಹೋದ್ಯೋಗಿಯೊಬ್ಬರಿಂದ ಚಿನ್ನ ಮತ್ತು ಲಕ್ಷಾಂತರ ಡಾಲರ್‌ ಹಣ ಸ್ವೀಕರಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದರು. ಈ ಬಗ್ಗೆ ನಡೆದ ವಿಚಾರಣೆ ವೇಳೆ, ತಾವು ಚಿನ್ನ ಹಾಗೂ ಲಕ್ಷಾಂತರ ಡಾಲರ್​​​ ಹಣ ಸ್ವೀಕರಿಸಿಲ್ಲ ಎಂದು ಆರೋಪ ತಳ್ಳಿ ಹಾಕಿದ್ದರು. ಸೂಕಿ ಬೆಂಬಲಿಗರು ಮತ್ತು ಕಾನೂನು ತಜ್ಞರು, ಮ್ಯಾನ್ಮಾರ್​ ನ್ಯಾಯಾಲಯದ ತೀರ್ಪು ಮತ್ತು ಮಿಲಿಟರಿ ಆಡಳಿತದ ಕಾನೂನು ಕ್ರಮವನ್ನು ಅನ್ಯಾಯವೆಂದು ಖಂಡಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ