ಉಕ್ರೇನ್ಗೆ ಅಮೆರಿಕಾ ಮಿಲಿಟರಿ ನೆರವು
ರಷ್ಯಾ ವಿರುದ್ಧ ಹೋರಾಟದಲ್ಲಿ ಉಕ್ರೇನ್ಗೆ ಹೊಸದಾಗಿ ನೂರಾರು ಮಿಲಿಯನ್ ಡಾಲರ್ ಮಿಲಿಟರಿ ನೆರವು ನೀಡಲಾಗುವುದು ಎಂದು ಅಮೆರಿಕದ ಉನ್ನತ ಮಟ್ಟದ ಅಧಿಕಾರಿಗಳು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿಗೆ ಭರವಸೆ ನೀಡಿದ್ದಾರೆ..ಯುದ್ಧ ಪೀಡಿತ ಉಕ್ರೇನ್ಗೆ 300 ಮಿಲಿಯನ್ ಡಾಲರ್ಗೂ ಹೆಚ್ಚಿನ ವಿದೇಶಿ ಮಿಲಿಟರಿ ಹಣಕಾಸಿನೊಂದಿಗೆ 165 ಮಿಲಿಯನ್ ಡಾಲರ್ನಷ್ಟು ಮೊತ್ತದ ಶಸ್ತ್ರಾಸ್ತ್ರ ಒದಗಿಸಲು ಅಮೆರಿಕ ಅನುಮೋದನೆ ನೀಡಿದೆ ಎಂದು ಝೆಲೆನ್ ಸ್ಕಿಗೆ ಜೊತೆಗೆ ನಡೆದ ಸಭೆಯಲ್ಲಿ ಅಮೆರಿಕ ಸೆಕ್ರೆಟರಿ ಆಫ್ ಸ್ಟೇಟ್ ಅಂಟೊನಿ ಬ್ಲಿಕೆನ್ ಮತ್ತು ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಅಸ್ಟಿನ್ ಹೇಳಿದ್ದಾರೆ.