ಬೆಂಗಳೂರು-ನಮ್ಮ ಮೆಟ್ರೋದಲ್ಲಿ ಬ್ಯಾಕ್ ಟು ಬ್ಯಾಕ್ ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ ಪ್ರಕರಣ ಹೆಚ್ಚಾಗ್ತಿದೆ ಹೀಗಾಗಿ ಮಹಿಳಾ ಸೇಫ್ಟಿಗೆ ನಮ್ಮ ಮೆಟ್ರೋ ಅಧಿಕಾರಿಗಳು ಒತ್ತುಕೊಟ್ಟಿದ್ದಾರೆ.ಶೀಘ್ರದಲ್ಲೇ ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಮತ್ತೊಂದು ಮೆಟ್ರೋ ಬೋಗಿ ಮೀಸಲಿರಲಿದೆ.ಸದ್ಯ ಬೆಂಗಳೂರು ಮೆಟ್ರೋದಲ್ಲಿ ಆರು ಬೋಗಿಯಲ್ಲಿ ಒಂದು ಬೋಗಿಯಲ್ಲಿ ಮಹಿಳೆಯರಿಗೆ ಮೀಸಲು ವ್ಯವಸ್ಥೆ ಮಾಡಲಾಗುತ್ತೆ.
ಆದ್ರೆ ಕಳೆದ ಕೆಲ ದಿನಗಳಿಂದ ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಮೆಟ್ರೋದಲ್ಲಿ ಕಾಮುಕರ ಕಿರುಕುಳಕ್ಕೆ ಮಹಿಳಾ ಪ್ರಯಾಣಿಕರು ಬೇಸತ್ತಿದ್ದು,ಆತಂಕದಲ್ಲಿ ಮಹಿಳಾ ಪ್ರಯಾಣಿಕರು ಮೆಟ್ರೋದಲ್ಲಿ ಓಡಾಟ ನಡೆಸ್ತಿದ್ರು.ಇದೀಗ ಮಹಿಳಾ ಪ್ರಯಾಣಿಕರ ಆತಂಕ ದೂರ ಮಾಡಲು ಮತ್ತೊಂದು ಮಹಿಳಾ ಬೋಗಿ ವ್ಯವಸ್ಥೆ ಮಾಡಲಾಗಿದೆ.ಆರು ಬೋಗಿಯ ರೈಲಿನಲ್ಲಿ ಎರಡು ಬೋಗಿಗಳನ್ನ ಮಹಿಳೆಯರಿಗೆ ಮೀಸಲಿಡಲು ಚಿಂತನೆ ನಡೆಸಲಾಗಿದೆ.