Lok Sabha Election 2024 result:ತಮ್ಮ ಗೆಲುವಿಗೆ ಕಾರಣವೇನೆಂದು ತಿಳಿಸಿದ ಡಾ ಸಿಎನ್ ಮಂಜುನಾಥ್
ಗೆಲುವಿನ ಬಳಿಕ ಮಾತನಾಡಿದ ಮಂಜುನಾಥ್ ತಮ್ಮ ಗೆಲುವಿನ ಕಾರಣವೇನೆಂದು ಹಂಚಿಕೊಂಡಿದ್ದಾರೆ. ಕಾರ್ಯಕರ್ಯರೊಂದಿಗೆ ಗೆಲುವಿನ ಸಂಭ್ರಮಾಚರಣೆ ಮಾಡಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಕಳೆದ 40 ವರ್ಷಗಳಿಂದ ಜಯದೇವ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞನಾಗಿ ಸಾವಿರಾರು ಮಂದಿಗೆ ಚಿಕಿತ್ಸೆ ನೀಡಿದ್ದೇನೆ. ಲಕ್ಷಾಂತರ ಜನರಿಗೆ ಚಿಕಿತ್ಸೆ ನೀಡಿದ್ದು ಈ ರೂಪದಲ್ಲಿ ನೆರವಿಗೆ ಬಂದಿದೆ. ನಾನು ಹಲವು ಕಡೆ ಭೇಟಿಯಾದಾಗ ನನ್ನಿಂದ ಚಿಕಿತ್ಸೆ ಪಡೆದ 10-15 ಸಿಗುತ್ತಿದ್ದರು. ಅವರು ಡಾಕ್ಟರ್ ಗೆಲ್ಲಬೇಕೆಂದು ಬಯಸಿದ್ದರು. ಇದರಿಂದಾಗಿಯೇ ನನಗೆ ಗೆಲುವು ಸಾಧ್ಯವಾಯಿತು ಎಂದು ಮಂಜುನಾಥ್ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಒಂದು ವೇಳೆ ಹೊಸ ಸರ್ಕಾರ ರಚನೆಯಾಗಿ ಅದರಲ್ಲಿ ಆರೋಗ್ಯ ಮಂತ್ರಿಯಾದರೆ ಆಯುಷ್ಮಾನ್ ಭಾರತ್ ಯೋಜನೆಗೆ ಮತ್ತಷ್ಟು ಹೊಸ ರೂಪ ನೀಡುವುದಾಗಿ ಹೇಳಿದ್ದಾರೆ.