ಹತ್ಯೆಯಾದ ನೇಹಾ ಮನೆಗೆ ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್ ಭೇಟಿ

Sampriya

ಮಂಗಳವಾರ, 23 ಏಪ್ರಿಲ್ 2024 (17:46 IST)
Photo Courtesy X
ಹುಬ್ಬಳ್ಳಿ:  ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ ಕುಟುಂಬಕ್ಕೆ ಸಾಂತ್ವನ ನೀಡಲು ಅವರ ಮನೆಗೆ ಭೇಟಿ ನೀಡಿ ಪೋಷಕರೊಂದಿಗೆ ಮಾತುಕತೆ ನಡೆಸಿದರು.

ಪೋಷಕರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಮುಸಲ್ಮಾನ ಮುಖಂಡರು ಅವರ ಹುಡುಗರಿಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಬುದ್ದಿ ಹೇಳಬೇಕು. ಒಂದು ವೇಳೆ ಅಪರಾಧ ಮಾಡಿದರೆ ಕುಟುಂಬದ ವ್ಯಾಪಾರ, ವಹಿವಾಟಿಗೆ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಬೇಕು ಎಂದು ಹೇಳಿದರು.

ಲವ್ ಜಿಹಾದ್ ಷಡ್ಯಂತ್ರದ ಸಮಗ್ರ ತನಿಖೆಯಾಗಬೇಕು. ಈ ಮಾನಸಿಕತೆ ಎಲ್ಲಿಂದ, ಯಾರಿಂದ ಬರುತ್ತಿದೆ? ಇಂತಹ ಕೃತ್ಯಗಳು ಇಲ್ಲಿಗೆ ಕೊನೆಯಾಗಬೇಕು. ಇನ್ನು ಪ್ರಕರಣದ ದಿಕ್ಕು ತಪ್ಪಿಸಲು ಆರೋಪಿಯ ಮೊಬೈಲ್ ಸೀಜ್ ಆದ ರಾತ್ರಿಯೇ ಅದರಲ್ಲಿನ ಫೋಟೋ ಹೊರಗೆ ಬಂದಿದೆ ಎಂದು ಹೇಳಿದರು.

ಇನ್ನೂ ಹತ್ಯೆಯಾದ ನೇಹಾ ತಂದೆ ಈ ಪ್ರಕರಣದ ಹಿಂದೆ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಪೊಲೀಸರು ಸಮರ್ಥರಾಗಿದ್ದು, ಅಧಿಕಾರಿಗಳು ಇದನ್ನು ಸರಿಯಾಗಿ ತನಿಖೆ ನಡೆಸಬೇಕೆಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ