ಧ್ವನಿ ಎತ್ತಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೆ ಇನ್ಸ್ಟಾಗ್ರಾಮ್ನಲ್ಲಿ ಕೊಲೆ ಬೆದರಿಕೆ
ಮೈಕ್, ಹಿಜಾಬ್ ಹಾಗೂ ಮಸೀದಿ ವಿಚಾರವಾಗಿ ಧ್ವನಿ ಎತ್ತಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೆ ಇನ್ಸ್ಟಾಗ್ರಾಮ್ನಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ. ಈ ವಿಚಾರವಾಗಿ ಮುತಾಲಿಕ್ ಅವರು ಈಗ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದ್ದಾರೆ.ಕಳೆದ ಎರಡು ದಿನಗಳ ಹಿಂದೆ ಉಡುಪಿಯ ಇನ್ಸ್ಟಾಗ್ರಾಮ್ ನ ಮಾರಿಗುಡಿ ಎಂಬ ಪೇಜ್ನಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಜೀವ ಬೆದರಿಕೆ ಹಾಕಲಾಗಿತ್ತು. ಅಲ್ಲದೇ ಅವರ ತಲೆ ಕಡಿದ್ರೆ 10 ಲಕ್ಷ ಬಹುಮಾನ ಕೊಡುವ ಮಾತನ್ನ ಉಲ್ಲೇಖ ಮಾಡಿದ್ದರು. ಈ ಪೇಜನ್ನ 60 ಜನ ಲೈಕ್ ಕೂಡಾ ಮಾಡಿದ್ರೆ, ಹಲವರು ಕಮೇಂಟ್ ಕೂಡಾ ಮಾಡಿದ್ರು. ಈ ವಿಚಾರವಾಗಿ ಪ್ರಮೋದ್ ಮುತಾಲಿಕ್ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲು ಏರಿದ್ದಾರೆ. ಧಮ್ಕಿ ವಿಚಾರವಾಗಿ ಪೊಲೀಸ್ ಆಯುಕ್ತ ಲಾಬುರಾಮ್ ಜೊತೆ ಚರ್ಚೆ ನಡೆಸಿ ಮುತಾಲಿಕ್, ಆರೋಪಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಲ್ಲದೇ ಮೂರು ನಂಬರ್ಗಳಿಂದ ಕೊಲೆ ಬೆದರಿಕೆ ಕರೆಗಳು ಕೂಡಾ ಬರುತ್ತಿವೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿರುವ ಮುತಾಲಿಕ್, ಈ ಬೆದರಿಕೆಗೆ ಹೆದರಿ ಯಾವುದೇ ಹೋರಾಟದಿಂದ ಹಿಂದೆ ಸರಿಯಲ್ಲ.ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ