LLC ಕಾಲುವೆ ಬಳಿ ಶ್ರೀರಾಮುಲು ವಾಸ್ತವ್ಯ

ಬುಧವಾರ, 2 ನವೆಂಬರ್ 2022 (16:17 IST)
ಬಳ್ಳಾರಿ ತಾಲೂಕಿನ ಬಿಡಿಹಳ್ಳಿ ಬಳಿಯ LLC ಕಾಲುವೆ ಪಿಲ್ಲರ್​ ದುರಸ್ತಿ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯಿಂದ ದುರಸ್ತಿ ಕಾಮಗಾರಿ ಸ್ಥಳದಲ್ಲೇ ಸಚಿವ ಶ್ರೀರಾಮುಲು ವಾಸ್ತವ್ಯ ಹೂಡಿದ್ದಾರೆ. ಬೆಳಿಗ್ಗೆ ದುರಸ್ತಿ ಕಾಮಗಾರಿ ಸಮೀಪದಲ್ಲಿಯೇ ವಾಯು ವಿಹಾರ ನಡೆಸಿದ ರಾಮುಲು, ರೈತರೊಂದಿಗೆ ನೀರಿಲ್ಲದೇ ಒಣಗುತ್ತಿರುವ ಭತ್ತ ಬೆಳೆ ವೀಕ್ಷಣೆ ಮಾಡಿದ್ರು. ವೇದಾವತಿ ನದಿಯಲ್ಲಿಯೇ ಸ್ನಾನ ಮಾಡಿದ ಸಚಿವ ಶ್ರೀರಾಮುಲು ಕಾಲುವೆಗೆ ನೀರು ಬಿಡುವವರೆಗೂ ಸ್ಥಳದಲ್ಲಿಯೇ ವಾಸ್ತವ್ಯ ಹೂಡುವ ಪಟ್ಟು ಹಿಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ