ಎಸ್ ಎಸ್ ಎಲ್ ಸಿ ಪರೀಕ್ಷೆ: ಅಧಿಕಾರಿಗಳ ಎಡವಟ್ಟಿಗೆ ವಿದ್ಯಾರ್ಥಿಗಳ ಆತಂಕ

ಶುಕ್ರವಾರ, 23 ಮಾರ್ಚ್ 2018 (18:02 IST)
ಶೈಕ್ಷಣಿಕ ಜಿಲ್ಲೆಯಲ್ಲಿ ಇಂದು ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ  ಸಾಕಷ್ಟು ಎಡವಟ್ಟುಗಳಿಗೆ ಸಾಕ್ಷಿಯಾಯಿತು. ಪರೀಕ್ಷೆ ಆರಂಭವಾಗುತ್ತಿದ್ದಂತೆ ಶಾಲಾ ಮುಖ್ಯಸ್ಥರ ಎಡವಟ್ಟಿನಿಂದ 1೦೦ ಕ್ಕೂ ಹೆಚ್ಚು ಅಥಣಿ ತಾಲೂಕಿನ ವಿದ್ಯಾರ್ಥಿಗಳು ಶಾಲಾ ಹಾಜರಾತಿಯ ಕೊರತೆಯಿಂದ ಪರೀಕ್ಷೆಯಿಂದ ಹೊರಕ್ಕೆ ಉಳಿದ ಘಟನೆ ಜರುಗಿತು. 
ನಂತರ ಅಥಣಿ ತಾಲೂಕಿನ ಶೆಗುಣಸಿ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಯನ್ನು ಪ್ರಶ್ನೆ ಪತ್ರಿಕೆ ವಾಹನದಲ್ಲಿ ಶಿಕ್ಷಕ ರೊಬ್ಬರು ಕರೆತಂದರು. ಪ್ರಶ್ನೆ ಪತ್ರಿಕೆ ವಾಹನದಲ್ಲಿ ಸಿಬ್ಬಂದಿ ಹೊರತು ಪಡಿಸಿ ಬೇರೆ ಯಾರನ್ನ ಕರೆ ತರಬಾರದು ಎಂಬ ನಿಯಮದಿಂದ ವಾಹನದಲ್ಲಿ  ವಿದ್ಯಾರ್ಥಿಯನ್ನು ಕರೆ ತಂದು ಅನಕೂಲ ಮಾಡಿ ಕೊಟ್ಟಿದ್ದೆ ತಪ್ಪಾದ ಹಾಗೆ ಮಾರ್ಗಾಧಿಕಾರಿ ಕಲ್ಲಪ್ಪ ಬಸಪ್ಪ ಗುಮ್ತಾಜ್ ಎಂಬ ಶಿಕ್ಷಕನನ್ನು ಚಿಕ್ಕೋಡಿ ಡಿಡಿಪಿಐ ಅಮಾನತು ಮಾಡಿದರು.
 
 ಇನ್ನೂ ಚಿಕ್ಕೋಡಿ ಪಟ್ಟಣದ ಆರ್.ಡಿ.ಹೈಸ್ಕೂಲ್ ನಲ್ಲಿ ನಕಲಿ ಚೀಟಿಗಳನ್ನು ಪರೀಕ್ಷಾ ಕೊಠಡಿಗೆ ಎಸೆಯಲು ಬಂದಿದ್ದ ಮೂವರು ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಪೊಲೀಸ್ ಠಾಣೆಗೆ ಕರೆದುಕೊಂಡ ಹೋದರು. ನಂತರ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಮೌಲ್ಯವೇ ಇಲ್ಲದಂತೆ ಸಾಮೂಹಿಕ ನಕಲು ನಡೆದ ದೃಶ್ಯಗಳು ರಾಯಬಾಗ ತಾಲೂಕಿನ ರೈನ್ ಬೊ ಸೆಂಟ್ರಲ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ಕಂಡು ಬಂದವು. 
 
ಪರೀಕ್ಷೆ ಮುಗಿಸಿ ಬಂದ ಮಕ್ಕಳು ಬಹಿರಂಗವಾಗಿ ನಕಲು ನಡೆದ ಬಗ್ಗೆ ಕ್ಯಾಮೆರಾ ಮುಂದೆ ಬಾಯಿ ಬಿಟ್ಟರು. ಪಾಸಿಂಗ್ ಮಾರ್ಕ್ಸ್ ಗಳ ಉತ್ತರ ಗಳನ್ನು ಶಿಕ್ಷಕರು ಹೇಳಿ ಕೊಟ್ಟರೆ ನಕಲಿ ಚೀಟಿಗಳನ್ನು ಉತ್ತರ ಬರೆಸಲಾಗಿದ್ದು ಪರೀಕ್ಷೆಯಲ್ಲಿ ಜಾತ್ರೆಯೇ ನಡೆಯಿತು ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ನಡೆದ ಮೊದಲ ಕನ್ನಡ ಪರೀಕ್ಷೆ ಶಿಕ್ಷಣ ಇಲಾಖೆ ಅಧಿಕಾರಿಗಳ ವೈಫಲ್ಯವನ್ನ ಎತ್ತಿ ತೋರಿಸಿತು. ಇನ್ನೂ ಮುಂದೆ ನಡೆಯುವ 5 ಪರೀಕ್ಷೆಗಳಲ್ಲಾದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ