ಇಡೀ ಬೆಂಗಳೂರಿಗರನ್ನ ಬಿಬಿಎಂಪಿ ಅಂಕಿ ಅಂಶಗಳು ಬೆಚ್ಚಿಬೀಳಿಸುತ್ತಿದೆ.ಈ ವರ್ಷದಲ್ಲೇ ಜನವರಿಯಿಂದ ಸೆಪ್ಪೆಂಬರ್ ವರಿಗೂ ಬೆಂಗಳೂರಿನಲ್ಲಿ 15,285 ಮಂದಿಗೆ ನಾಯಿ ಕಡಿತವಾಗಿದೆ.ನಾಯಿ ದಾಳಿ ತಡೆಯೋಕೆ ಆಗದ ಪಾಲಿಕೆ ಜನರನ್ನ ಹೇಗೆ ರಕ್ಷಣೆ ಮಾಡುತ್ತೆ..?ಬೀದಿನಾಯಿಗಳ ಆಪರೇಷನ್ ಹೆಸರಿನಲ್ಲಿ ದುಡ್ಡು ಲೂಟಿ ಮಾಡುತ್ತಿದ್ಯಾ ಪಾಲಿಕೆ.?ಪ್ರತಿ ವರ್ಷ ನಾಯಿಗಳ ನಿಯಂತ್ರಣಕ್ಕೆ ಬಿಬಿಎಂಪಿ ಕೋಟಿ ಕೋಟಿ ಖರ್ಚು ಮಾಡುತ್ತೆ.ಆದ್ರೆ ಬೆಂಗಳೂರಿನಲ್ಲಿ ಬೀದಿನಾಯಿಗಳ ಕಡಿತ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ.
ಬೆಂಗಳೂರು ಪೂರ್ವ ಪಶ್ಚಿಮ ವಲಯದಲ್ಲಿ ಅತಿ ಹೆಚ್ಚು ಜನರಿಗೆ ನಾಯಿ ಕಡಿತವಾಗಿದೆ.ಈ ವರ್ಷದಲ್ಲಿ ಪೂರ್ವ ವಲಯದಲ್ಲಿ 4109 ಮಂದಿಗೆ ನಾಯಿ ಕಡಿತವಾಗಿದೆ.ಪಶ್ಚಿಮ ವಲಯದಲ್ಲಿ 3654 ಮಂದಿಗೆ ನಾಯಿ ಕಡಿತ ಪ್ರಕರಣಗಳು ದಾಖಲಾಗಿದೆ.ಈ ವರ್ಷದಲ್ಲಿ ನಾಯಿ ದಾಳಿಗೊಳದವರ ಪಟ್ಟಿ ಪಾಲಿಕೆ ಬಿಡುಗಡೆ ಮಾಡಿದೆ.ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ 15285 ಮಂದಿ ಗೆ ನಾಯಿ ಕಡಿತವಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರೆಡ್ಡಿ ಶಂಕರ್ ಬಾಬು ಹೇಳಿದ್ದಾರೆ.