ಮಹಾಕುಂಭಮೇಳದಲ್ಲಿ ಕಾಲ್ತುಳಿತ: ಚಿತ್ರದುರ್ಗದ ಗುರುಪೀಠದ ನಾಗಸಾಧು ಸಾವು

Sampriya

ಶುಕ್ರವಾರ, 31 ಜನವರಿ 2025 (18:54 IST)
Photo Courtesy X
ಚಿತ್ರದುರ್ಗ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳದಲ್ಲಿ ನಡೆದಿದ್ದ ಕಾಲ್ತುಳಿತದಲ್ಲಿ ನಗರದ ಬಂಜಾರ ಗುರುಪೀಠದ ನಾಗಸಾಧುನಾಗನಾಥ್‌ ಮಹರಾಜ್‌ (48) ಅವರು ಮೃತಪಟ್ಟಿದ್ದಾರೆ. ಈ ವಿಷಯವನ್ನು ಬಂಜಾರ ಗುರುಪೀಠದ ಸೇವಾಲಾಲ್ ಸ್ವಾಮೀಜಿ ಖಚಿತಪಡಿಸಿದ್ದಾರೆ.

ತಾಲ್ಲೂಕಿನ ಸಿಬಾರದಲ್ಲಿರುವ ಬಂಜಾರ ಗುರುಪೀಠದಲ್ಲಿ ನಾಗನಾಥ್‌ ಮಹರಾಜ್‌ 7 ವರ್ಷಗಳಿಂದ ವಾಸಿಸುತ್ತಿದ್ದರು. 15 ದಿನಗಳ ಹಿಂದಷ್ಟೇ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಗ್‌ರಾಜ್‌ಗೆ ತೆರಳಿದ್ದರು. ಇದೀಗ ಅಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗುರುಪೀಠದ ಸೇವಾವಾಲ್ ಸ್ವಾಮೀಜಿ ಅವರು, ಪವಾಡಪುರುಷರಾಗಿದ್ದ ಅವರು ನಮ್ಮ  ಗುರುಪೀಠಕ್ಕೆ ಬಂದಿದ್ದೇ ಆಶ್ಚರ್ಯ. ಅವರ ಮೂಲ ಯಾವುದು ಎಂಬುದು ಯಾರಿಗೂ ಗೊತ್ತಿಲ್ಲ. ಅವರ ಸಾವಾಗಿರುವುದು ನೋವು ತಂದಿದೆ. ಕುಂಭಮೇಳದಲ್ಲಿ ಪಾಲ್ಗೊಳ್ಳಲು ಹಂತ ಹಂತವಾಗಿ ಭಕ್ತರನ್ನು ಬಿಡುತ್ತಿದ್ದರೆ ಈ ಅನಾಹುತ ಆಗುತ್ತಿರಲಿಲ್ಲ ಎಂದರು,

ಪ್ರಯಾಗ್‌ರಾಜ್‌ನಲ್ಲಿ ಅನಾಥವಾಗಿರುವ ಮಹಾನ್ ಜ್ಞಾನಿಯಾಗಿದ್ದ ನಾಗನಾಥ್‌ ಮಹರಾಜ್‌ ಅವರ ಪಾರ್ಥಿವ ಶರೀರವನ್ನು ಕೂಡಲೇ ಕರ್ನಾಟಕ ಸರ್ಕಾರ ಅವರ ಮೃತಹದೇಹವನ್ನು ತರಲು ವ್ಯವಸ್ಥೆ ಮಾಡಬೇಕು. ಪಾರ್ಥಿವ ಶರೀರವನ್ನು ಮಠಕ್ಕೆ ನೀಡಿದರೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ