ರಾಜ್ಯ ಬಜೆಟ್ ಮಂಡನೆ; ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಹೆಚ್ಚಳ
ಶುಕ್ರವಾರ, 16 ಫೆಬ್ರವರಿ 2018 (13:26 IST)
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2018-19ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದು, ಇದರ ಪ್ರಕಾರ ಎಸ್.ಸಿ. ಹುಡುಗ ಬೇರೆ ಜಾತಿ ಹುಡುಗಿಯನ್ನು ಮದುವೆಯಾದರೆ 3 ಲಕ್ಷ ಪ್ರೋತ್ಸಾಹ ಧನ, ಎಸ್.ಸಿ. ಹುಡುಗಿ ಬೇರೆ ಜಾತಿ ಹುಡುಗಯನ್ನು ಮದುವೆಯಾದರೆ 5 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು. ಹಾಗೆ ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳ ಪ್ರೋತ್ಸಾಹ ಧನ 1 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.
ದೇವದಾಸಿ ಹೆಣ್ಣುಮಕ್ಕಳ ಮದುವೆಗೆ 5 ಲಕ್ಷ ಸಹಾಯಧನ, ದೇವದಾಸಿ ಗಂಡು ಮಕ್ಕಳ ಮದುವೆಗೆ 3 ಲಕ್ಷ ಸಹಾಯಧನ ನೀಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ