ಮಕ್ಕಳಿಗೆ ವಿಚಿತ್ರ ರೋಗ : ಪಾಲಕರು ಕಂಗಾಲು – ದೌಡಾಯಿಸಿದ ವೈದ್ಯರು
ಆ ಶಾಲೆಯಲ್ಲಿನ ಮಕ್ಕಳಿಗೆ ವಿಚಿತ್ರ ರೋಗ ಹರಡುತ್ತಿದ್ದು, ಅದರಿಂದ ಪಾಲಕರು ಕಂಗಾಲಾಗಿದ್ದಾರೆ.
ಓಬಳಾಪುರದ ಮಕ್ಕಳ ಚಿಕಿತ್ಸೆಗೆ ದೌಡಾಯಿಸಿದ್ದಾರೆ ವೈದ್ಯರು. ಮಕ್ಕಳಿಗೆ ನಿಗೂಢ ರೀತಿಯಲ್ಲಿ ಮುಖದಲ್ಲಿ ಬಾವು ಕಂಡುಬರುತ್ತಿದೆ. ಇದರಿಂದ ಮಕ್ಕಳ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಓಬಳಾಪುರ ವ್ಯಾಪ್ತಿಯ ಅಳಗವಾಡಿಯ ಆರೋಗ್ಯ ಕೇಂದ್ರದ ವೈದ್ಯರು ಭೇಟಿ ನೀಡಿದ್ದು, ಮಕ್ಕಳ ರಕ್ತದ ಮಾದರಿ ಮತ್ತು ಕಫ ಮಾದರಿಯ ಪಡೆದು ಚಿತ್ರದುರ್ಗದ ಲ್ಯಾಬ್ ಗೆ ಕಳುಹಿಸಿದ್ದಾರೆ.
ಮಕ್ಕಳಿಗೆ ಮುಂಜಾಗ್ರತಾ ಕ್ರಮವಾಗಿ ಚುಚ್ಚುಮದ್ದು ನೀಡಲಾಗಿದೆ. ಮಕ್ಕಳಿಗೆ ಕಾಯ್ದು ಆರಿಸಿದ ನೀರನ್ನು ಕುಡಿಯಲು ಸಲಹೆ ನೀಡಲಾಗಿದೆ.