ವಿಚಿತ್ರ ಘಟನೆ : ಕೇವಲ ಒಂದು ವಾಚ್‍ಗಾಗಿ ಹೀಗೆ ಮಾಡೋದಾ?

ಬುಧವಾರ, 6 ಸೆಪ್ಟಂಬರ್ 2023 (09:40 IST)
ಹುಬ್ಬಳ್ಳಿ : ಬೆಲೆ ಬಾಳುವ ವಾಚ್ಗಾಗಿ ಯುವಕನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿ ನಗರದ ಬೆಂಗೇರಿಯಲ್ಲಿ ನಡೆದಿದೆ.

ಮನೋಜ್ ಪಾರ್ಕ್ ನಿವಾಸಿ ಅಸ್ಲಂ ಮಕಂದರ್ (30) ಹತ್ಯೆಯಾದ ಯುವಕ. ಮಂಜುನಾಥ್ ಜೋನಲ್ಲಿ ಎಂಬಾತನಿಂದ ಈ ಹತ್ಯೆಯಾಗಿದ್ದು, ಹಲ್ಲೆನಡೆಸಿ ಎದೆ ಭಾಗಕ್ಕೆ ಚಾಕುವಿನಿಂದ ಇರಿದು ಅಸ್ಲಂನನ್ನು ಕೊಲೆ ಮಾಡಿದ್ದಾನೆ. 

ಕೊಲೆಯಾದ ಕೆಲವೇ ಹೊತ್ತಿನಲ್ಲಿ ಆರೋಪಿ ಮಂಜುನಾಥನ ಬಂಧನವಾಗಿದ್ದು, ಮೃತ ಅಸ್ಲಾಂ ಮೃತದೇಹ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರ ಭೇಟಿ ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ