ವೈದ್ಯಕೀಯ ಸ್ನಾತಕೋತ್ತರ ಪದವಿ ಶುಲ್ಕ ಹೆಚ್ಚಳ ಕೈ ಬಿಡುವಂತೆ ವಿದ್ಯಾರ್ಥಿಗಳಿಂದ ಸರ್ಕಾರಕ್ಕೆ ಮನವಿ

ಬುಧವಾರ, 29 ಏಪ್ರಿಲ್ 2020 (12:13 IST)
ಬೆಂಗಳೂರು : ವೈದ್ಯಕೀಯ ಸ್ನಾತಕೋತ್ತರ ಪದವಿ ಶುಲ್ಕ ಹೆಚ್ಚಳ ವಿಚಾರ ಶುಲ್ಕ ಹೆಚ್ಚಳ ಕೈಬಿಡುವಂತೆ ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


ಕೊರೊನಾ ವಾರಿಯರ್ಸ್ ಆಗಿ ನಾವು ಸೇವೆ ಮಾಡುತ್ತಿದ್ದೇವೆ. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಜತೆ ನಾವಿದ್ದೇವೆ. ಸರ್ಕಾರವೂ ನಮ್ಮ ಜತೆ ಇರಬೇಕೆಂದು ಬಯಸುತ್ತೇವೆ ಎಂದು ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಸರ್ಕಾರಕ್ಕೆ ಮನವಿ ಮಾಡಿದೆ.


ಪಿಜಿ ಮೆಡಿಕಲ್ ವಿದ್ಯಾರ್ಥಿಗಳ ಶುಲ್ಕ 5 ಪಟ್ಟು ಹೆಚ್ಚಳ ವಾಗಿದ್ದು, ಇದರಿಂದ 40 ಸಾವಿರ ಇದ್ದ ಶುಲ್ಕ 1.3 ಲಕ್ಷ ರೂ. ಆಗಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಶುಲ್ಕ ಕಡಿಮೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ