ಇಂದು ಕೃಷ್ಣ ಬೈರೇಗೌಡ ನಾಮ ಪತ್ರ ಸಲ್ಲಿಕೆ

ಗುರುವಾರ, 20 ಏಪ್ರಿಲ್ 2023 (20:07 IST)
ಮೇ 10 ರಂದು ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು,ಕಾಂಗ್ರೆಸ್ ನ ಯುವನಾಯಕ ಕೃಷ್ಣ ಭೈರೇಗೌಡ ಇಂದು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ,ನಾಮಪತ್ರ ಸಲ್ಲಿಸುವುದಕ್ಕೂ ಮುಂಚಿತವಾಗಿ ಗುಂಡಂಜನೇಯ ಸ್ವಾಮಿ ದೇವವಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಬ್ಯಾಟರಾಯನಪುರದ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರವನ್ನ ಸಲ್ಲಿಸಿದ್ದಾರೆ.ಇನ್ನೂ ನಾಮಪತ್ರ ಸಲ್ಲಿಖೆಯಲ್ಲಿ ಸಾವಿರಾರು ಸಂಖ್ಯೆಯ ಬೆಂಬಲಿಗರು ಬೈರೇಗೌಡರಿಗೆ ಸಾಥ್ ನೀಡಿದ್ದು , ಜಾನಪದ ಕಲಾ ತಂದಗಳೊಂದಿಗೆ ರೋಡ್ ಶೋ ಮೂಲಕ ತೆರಳಿ ನಾಮಪತ್ರವನ್ನ ಸಲ್ಲಿಖೆ ಮಾಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ