ಕಮಲ ಕೈ ಹಿಡಿದ ಸುಮ: ಈ ದಿನ ಸುದಿನ ಎಂದ ಮಂಡ್ಯ ಸಂಸದೆ

Sampriya

ಶುಕ್ರವಾರ, 5 ಏಪ್ರಿಲ್ 2024 (12:53 IST)
Photo Courtesy X
ಬೆಂಗಳೂರು:  ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.  ಮಲ್ಲೇಶರಂನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಅವರು ಕೇಸರಿ ಶಾಲು ಹೊದಿಸಿ, ಕೇಸರಿ ಬಾವುಟ ನೀಡಿ ಬಿಜೆಪಿಗೆ ಸ್ವಾಗತಿಸಿದರು.

ಈ ವೇಳೆ ಮಂಡ್ಯ ಬೆಂಬಲಿಗರು ಆಗಮಿಸಿದ್ದು, ಸುಮಲತಾ ಅಂಬರೀಶ್‌ ಗೆ ಸಾಥ್ ನೀಡಿದರು.

ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್​​ಗಾಗಿ ಸುಮಲತಾ ಸಾಕಷ್ಟು ಹೋರಾಟ ನಡೆಸಿದ್ದರು. ಆದರೆ ಬಿಜೆಪಿ ಜೆಡಿಎಸ್ ಮೈತ್ರಿಯಿಂದಾಗಿ ಟಿಕೆಟ್ ಕೈತಪ್ಪಿದ್ದು, ಬೇರೆ ಕ್ಷೇತ್ರಗಳಲ್ಲಿ ಸುಮಲತಾಗೆ ಬಿಜೆಪಿ ಆಫರ್ ನೀಡಿತ್ತು. ಆದರೆ ಮಂಡ್ಯ ಬಿಟ್ಟು ನಾನೇಲ್ಲೂ ಹೋಗಲ್ಲ ಎಂದಾ ಸುಮಲತಾಗೆ ಕೊನೆಗೂ ಟಿಕೆಟ್ ಮಿಸ್‌ ಆಗಿದ್ದರಿಂದ ಮುನಿಸಿಕೊಂಡರು.

ಇನ್ನೂ ಸ್ವತಂತ್ರ್ಯವಾಗಿ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆಸಿ ನಿರ್ಧರಿಸುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ಮಾಡಿ ಸುಮಲತಾ ಅವರಲ್ಲಿ ಮಂಡ್ಯ ಲೋಕಸಭಾ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಕೋರಿದ್ದರು. ಇದರ ಬೆನ್ನಲ್ಲೇ ಮಂಡ್ಯ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರ್ಸವಾಮಿ ಭೇಟಿಯಾಗಿ ಬೆಂಬಲ ಕೋರಿದ್ದರು.

ಈ ಬೆಳವಣಿಗೆ ನಂತರ ಮಂಡ್ಯದಲ್ಲಿ ಸ್ಪರ್ಧೆ ಮಾಡದೆ, ಪ್ರಧಾನಿ ನರೇಂದ್ರ ಮೋದಿ ಗೆಲುವಿಗಾಗಿ ಕಣದಿಂದ ಹಿಂದೆ ಸರಿಯುವುದಾಗಿ ಹೇಳಿದ್ದರು. ಅದರಂಯೆ ಶೀಘ್ರದಲ್ಲೇ ಬಿಜೆಪಿ ಸೇರುವುದಾಗಿ ಹೇಳಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ