ಸಂಸದೆ ಸುಮಲತಾ ಅಂಬರೀಶ್ ಈದ್ಗಾ ಮೊಹಲ್ಲಾಕ್ಕೆ ಭೇಟಿ ನೀಡಿದ್ಯಾಕೆ?
ಈದ್ಗಾ ಮೊಹಲ್ಲಾಕ್ಕೆ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿದ್ದಾರೆ.
ಮಳವಳ್ಳಿ ತಾಲೂಕಿನ ಉಗ್ರಾಣಪುರದ ದೊಡ್ಡಿ ನಿವಾಸಿಗಳಿಗೆ ಉಚಿತವಾಗಿ ಆಹಾರ ಸಾಮಾಗ್ರಿಗಳ ಒಳಗೊಂಡ ದಿನಸಿ ಕಿಟ್, ಎಲೆಕೋಸು, ದಪ್ಪಮೆಣಸಿನಕಾಯಿ ವಿತರಿಸಿದರು. ಮಳವಳ್ಳಿ ತಾಲ್ಲೂಕಿನ ಸರ್ಕಾರಿ ಅತಿಥಿಗೃಹದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಕೊರೊನಾ ತಡೆಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಸುರಕ್ಷತಾ ಕ್ರಮ ಮತ್ತು ನಿರ್ಬಂಧಿತ ಪ್ರದೇಶಗಳಿಗೆ ಅಗತ್ಯ ವಸ್ತುಗಳ ಪೂರೈಕೆ ಕುರಿತು ಚರ್ಚಿಸಿದರು.