ಸಿಎಂ ಬಸವರಾಜ ಬೊಮ್ಮಾಯಿ ಅವರು 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಅಂತ ಹೇಳಿದ್ರು. ಇದು ಈಗ ಮಾರ್ಕೆಟ್ ಆಗಿದೆ, ಸೇಲ್ ಆಗಿದೆ ಅಂತಾ ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಕಿಡಿಕಾರಿದ್ದಾರೆ. Pwd, ಪೋಲೀಸ್ ಸಬ್ ಇನ್ಸ್ಪೆಕ್ಟರ್ ಎಲ್ಲಾ ಉದ್ಯೋಗಗಳು ಮಾರಾಟಕ್ಕಿವೆ. ಬ್ಲೂ ಟೂತ್, ಕ್ಯಾಮೆರಾ ಬಳಸಿ ಕಾಪಿ ಮಾಡಿಸಲಾಗಿದೆ. ಈಗಾಗಲೆ psi ಅಕ್ರಮ ರಾಜ್ಯದ ಜನತೆಗೆ ತಿಳಿದಿದೆ. ಬಿಜೆಪಿಯವರು ವಿಧಾಸೌಧವನ್ನ ದುಡ್ಡು ಸ್ವೀಕರಿಸೋದಕ್ಕೆ ಇಟ್ಟುಕೊಂಡಿದ್ದಾರೆ. ಪೋಲೀಸರು ಅರೆಸ್ಟ್ ಮಾಡಲು ಹೋದಾಗ ಆರ್.ಡಿ. ಪಾಟೀಲ್ ಪೊಲೀಸರನ್ನು ತಳ್ಳಿ ಹೋಗಿದ್ದಾರೆ. ಆರ್.ಡಿ.ಪಾಟೀಲ್ ಈ ಪತ್ರದಲ್ಲಿ ಲೋಕಾಯುಕ್ತಕ್ಕೆ ಬರೆದಿದ್ದಾರೆ.
ತನಿಖಾಧಿಕಾರಿ 3 ಕೋಟಿ ಕೇಳಿದ್ದಾರೆ. ಈ ಕೇಸ್ ಮುಚ್ಚಾಕಲು ಈಗಾಗಲೇ ಅವರು 76 ಲಕ್ಷ ಹಣವನ್ನು ಕೊಟ್ಟಿದ್ದಾರೆ.
ಈ ಕೇಸ್ ಸಂಪೂರ್ಣವಾಗಿ ಹೈಕೋರ್ಟ್ ಚೀಫ್ ಜಸ್ಟೀಸ್ ಮೂಲಕ ತನಿಖೆ ಮಾಡಬೇಕು. ಇಲ್ಲವಾದರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು psi ಕೇಸ್ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಅಂತಾ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರೆ.