ವಿವಾದಿತ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.ನಾಳೆ ಬೆಳಗ್ಗೆ 8-30 ಕ್ಕೆ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನೇರವೇರಲಿದೆ.ಸ್ಥಳದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು,ಗಣರಾಜ್ಯೋತ್ಸವ ಆಚರಣೆಗೆ ಮೈದಾನದಲ್ಲಿ ಸ್ವಚ್ಚತಾ ಕಾರ್ಯವನ್ನ ಮಾಡಲಾಗ್ತಿದೆ.
ಸಂಜೆಯೊಳಗೆ ಮೈದಾನದಲ್ಲಿ ಕಂದಾಯ ಇಲಾಖೆ ಧ್ವಜ ಸ್ತಂಭ ಇಡಲಿದೆ.ನಾಳೆ ಬೆಳಗ್ಗೆ 8-30 ಕ್ಕೆ ವಿವಾದಿತ ಮೈದಾನದಲ್ಲಿ ಬೆಂಗಳೂರು ನಗರ ಉತ್ತರ ಎಸಿ ಶಿವಣ್ಣ ನೇತೃತ್ವದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.ಹೀಗಾಗಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಮೈದಾನದಲ್ಲಿ ಕಂದಾಯ ಇಲಾಖೆಯಿಂದ ಸಿದ್ದತೆ ನಡೆದಿದೆ.ಪೊಲೀಸ್ ಭದ್ರತೆಯಲ್ಲಿ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಕಂದಾಯ ಇಲಾಖೆ ಮುಂದಾಗಿದೆ.