ದೆಹಲಿಗೆ ಸರ್ಪೈಸ್ ಮುಖ್ಯಮಂತ್ರಿ, ಮೋದಿ ಇಂದು ಘೋಷಣೆ

Krishnaveni K

ಭಾನುವಾರ, 9 ಫೆಬ್ರವರಿ 2025 (10:58 IST)
Photo Credit: X
ನವದೆಹಲಿ: ಭರ್ಜರಿ ಬಹುಮತ ಪಡೆದು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗದ್ದುಗೇರಿರುವ ಬಿಜೆಪಿಗೆ ಈಗ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಈ ನಡುವೆ ಇಂದು ಮೋದಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಅಚ್ಚರಿಯ ಅಭ್ಯರ್ಥಿ ಆಯ್ಕೆಯಾಗುವ ಸಾಧ್ಯತೆಯಿದೆ.

ನರೇಂದ್ರ ಮೋದಿ-ಅಮಿತ್ ಶಾ ಬಿಜೆಪಿಯ ಚುಕ್ಕಾಣಿ ಹಿಡಿದ ಬಳಿಕ ಹಲವು ರಾಜ್ಯಗಳಿಗೆ ಅಚ್ಚರಿಯ ಅಭ್ಯರ್ಥಿಯನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದ್ದರು. ಇದರಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡಾ ಒಬ್ಬರು. ಇದರಿಂದ ಪಕ್ಷಕ್ಕೆ ಲಾಭವೇ ಆಗಿದೆ.

ಈಗ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೂ ಹಲವರ ಹೆಸರು ಕೇಳಿಬರುತ್ತಿದೆ. ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ರನ್ನು ಸೋಲಿಸಿದ ವೀರೇಂದ್ರ ಸಚ್ ದೇವ, ಮನೋಜ್ ತಿವಾರಿ, ವಿಜೇಂದ್ರ ಗುಪ್ತಾ,  ಆಶಿಶ್ ಸೂದ್, ಜಿತೇಂದ್ರ ಮಹಾಜನ್ ಇತ್ಯಾದಿ ಹೆಸರುಗಳು ಮುಖ್ಯಮಂತ್ರಿ ರೇಸ್ ನಲ್ಲಿವೆ.

ಇವರು ಯಾರೂ ಇದುವರೆಗೆ ಉನ್ನತ ಹುದ್ದೆಯನ್ನು ಅಲಂಕರಿಸಿ ಫೇಮಸ್ ಆದವರಲ್ಲ. ಹೀಗಾಗಿ ಇವರಲ್ಲೇ ಅರ್ಹರಿಗೆ ಮಣೆ ಹಾಕುವ ಮೂಲಕ ಅಚ್ಚರಿಯ ಅಭ್ಯರ್ಥಿ ಘೋಷಣೆ ಮಾಡುವ ಸಾಧ್ಯತೆಯಿದೆ. ಇಂದು ಮೋದಿ ನೇತೃತ್ವದಲ್ಲಿ ಮುಖ್ಯಮಂತ್ರಿ ಆಯ್ಕೆಗೆ ಸಭೆ ನಡೆಯಲಿದ್ದು ಈ ವೇಳೆ ನೂತನ ಮುಖ್ಯಮಂತ್ರಿ ಯಾರು ಎಂದು ಘೋಷಣೆಯಾಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ