ಗಂಡನೊಂದಿಗೆ ಅಕ್ರಮ ಸಂಬಂದದ ಶಂಕೆ- ಪತ್ನಿಯಿಂದ ಗಲಾಟೆ

geetha

ಸೋಮವಾರ, 5 ಫೆಬ್ರವರಿ 2024 (14:30 IST)
ಬೆಂಗಳೂರು-ಗಂಡನೊಂದಿಗೆ ಅಕ್ರಮ ಸಂಬಂದದ ಶಂಕೆಗೆ ಮಹಿಳೆ ಮನೆಯ ಮೇಲೆ ಪತ್ನಿ ದಾಳಿ ಮಾಡಿಸಿದ್ದಾಳೆ.ದಾಳಿ ಮಾಡಿ ಮನೆ ಕಿಟಕಿ ಗಾಜು, ಡೋರ್, ಹಾಗೂ ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಗಳ ಗಾಜು ಹೊಡೆದು ಗುಂಡಾ ವರ್ತನೆ ತೋರಿದ್ದಾಳೆ.ಮಾರುತಿ ಲೇಔಟ್ ಬಿಳೇಶಿವಾಲೆ ದೊಡ್ಡಗುಬ್ಬಿ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ.
 
ಕಳೆದ ಮೂರು ವರ್ಷಗಳ ಹಿಂದೆ  ಮಹಿಳೆಗೆ ಆತ್ಮೀಯರಾಗಿದ್ದ ಶರಣ್ ಎಂಬಾತ ಮಹಿಳೆ ಮನೆ ಕಟ್ಟಿಸುವಾಗ ಜಲ್ಲಿ , ಎಂ ಸ್ಯಾಂಡ್ , ಬ್ಲಾಕ್ಸ್ ಗಳನ್ನ ಖರೀದಿ ಮಾಡಿರುತ್ತಾರೆ‌.ಖರೀದಿ ಮಾಡಿ ಕ್ಯಾಶ್ ರೂಪದಲ್ಲಿ ಶರಣ್ ಎಂಬುವರಿಗೆ ಮಹಿಳೆ ಹಣ ಕೊಟ್ಟಿದ್ದಾಳೆ.ಇದನ್ನೆ ತಪ್ಪಾಗಿ ತಿಳಿದು ಈ ಹಿಂದೆ ಶರಣ್ ಪತ್ನಿ ಸಮಂತಾ ವಾರ್ನಿಂಗ್ ಕೊಟ್ಟಿದ್ದರು.ನನ್ನ ಗಂಡನ ಜೊತೆ ಅಕ್ರಮ ಸಂಬಂದ ಇಟ್ಟುಕೊಂಡಿದ್ದಿಯಾ ಎಂದು ಗಲಾಟೆ ಮಾಡಿದ್ರು.ಆಗ ಶರಣ್ ಜೊತೆ ಯುವತಿ ಮತಮಾಡೊದನ್ನ‌ ಬಿಟ್ಟಿರುತ್ತಾನೆ.ಅದಾದ ಬಳಿಕವು ಮಾಲ್ ಒಂದರಲ್ಲಿ ಶರಣ್ ಜೊತೆ ಮಹಿಳೆ ಇದ್ದಳು.ವಿಚಾರ ತಿಳಿದು ರಾತ್ರೋ ರಾತ್ರಿ ಶರಣ್ ಪತ್ನಿಯಿಂದ ಗಲಾಟೆ ನಡೆದಿದೆ.ಸಮಂತಾ ಹಾಗೂ ಕೆಂಪರಾಜು, ಶರತ್ ಎಂಬುವವರು ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ.ಘಟನೆ ಸಂಬಂಧ ಮಹಿಳೆಯಿಂದ ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ