ಪ್ರಣಯವಾಯಿತೇ ಪ್ರಣವಾನಂದರಿಗೆ?: ವೈವಾಹಿಕ ಜೀವನಕ್ಕೆ ಪೀಠಾಧೀಶ

ಸೋಮವಾರ, 7 ನವೆಂಬರ್ 2016 (16:14 IST)
ಭವಬಂಧನಗಳಿಂದ ಬೇಸತ್ತು, ವೈರಾಗ್ಯ ಮನೋಭಾವ ಬರುತ್ತಿದ್ದಂತೆ ಸಾಮಾನ್ಯವಾಗಿ ಸನ್ಯಾಸತ್ವ ತ್ಯಜಿಸುತ್ತಾರೆ. ಆದರೆ ಕಲಬುರಗಿಯ ಸ್ವಾಮಿಯೊಬ್ಬರಿಗೆ ಬಂದ ವೈರಾಗ್ಯ ಮಾಸಿಹೋಗಿದೆ ಎನ್ನಿಸುತ್ತದೆ. ಪೀಠಾಧಿಪತಿಯಾಗಿರುವ ಅವರು ಸಂಸಾರ ಜೀವನಕ್ಕೆ ಕಾಲಿಟ್ಟಿದ್ದಾರೆ.
ದೇವಸ್ಥಾನದ ದಾಸೋಹ ಚಾವಣಿಯ ಪ್ರತ್ಯೇಕ ಕೋಣೆಯಲ್ಲಿ ವೇದ ಮಂತ್ರಗಳ ಪಠಣದೊಂದಿಗೆ ಸ್ವಾಮಿ ಗೃಹಸ್ಥಾಶ್ರಮಕ್ಕೆ ಸೇರಿದ್ದಾರೆ.
 
ಹೌದು, ಕಲಬುರಗಿಯ ಶರಣಬಸವೇಶ್ವರ ಮಠದ ಪ್ರಣವಾನಂದ ಸ್ವಾಮೀಜಿ ಸೋಮವಾರ ಮುಂಜಾನೆ ವಿವಾಹ ಬಂಧನಕ್ಕೆ ಕಾಲಿಟ್ಟಿದ್ದಾರೆ. ಸ್ವಾಮೀಜಿ ಮೂಲತಃ ಕೇರಳದವರೆಂದು ಹೇಳಲಾಗುತ್ತಿದ್ದು ಅಲ್ಲಿಯದೇ ಯುವತಿ, ಸಿಎ ಎರಡನೇ ಸೆಮಿಸ್ಟರ್ ವಿದ್ಯಾರ್ಥಿನಿ ಮೀರಾಳನ್ನು ವಿವಾಹವಾಗಿದ್ದಾರೆ. ಈ ವಿವಾಹ ಸಮಾರಂಭಕ್ಕೆ ಭಕ್ತ ಸಮೂಹ, ಹಲವು ಮಠಾಧೀಶರು, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಕಾರ್ಯಕರ್ತರು ಭಾಗಿಯಾಗಿದ್ದಾರೆ.
 
ಈ ಮಠ ಸಂಸಾರಸ್ಥ ಸ್ವಾಮಿಗಳ ಮಠವಾಗಿದ್ದು, ಭಕ್ತರ ಕೋರಿಕೆ ಮೇರೆಗೆ ಪರಂಪರೆಯನ್ನು ಮುಂದುವರೆಸಲು ಸ್ವಾಮಿ ಮದುವೆಯಾಗಿದ್ದಾರೆ ಎಂದು ಮಠದ ಮೂಲಗಳು. ಆದರೆ ಇವರಿಬ್ಬರ ನಡುವೆ ಪ್ರೀತಿ-ಪ್ರೇಮವಿತ್ತು ಎಂಬ ಗುಸು ಗುಸು ಕೇಳಿ ಬರುತ್ತಿದೆ. 
 
ಎಲ್ಲ ಬಿಟ್ಟು ಕಾವಿ ತೊಟ್ಟವರು ಹಸೆಮಣೆ ಏರಿದ್ದು ಹೊಸ ಚರ್ಚೆಗೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ