ಅಬ್ಬರದ ಪ್ರಚಾರ ಮಾಡ್ತಿರುವ ಸ್ವರೂಪ್, ಭವಾನಿ

ಗುರುವಾರ, 16 ಫೆಬ್ರವರಿ 2023 (18:23 IST)
ಹಾಸನ ಗಾದಿಯ ಟಿಕೆಟ್​ಗಾಗಿ ಜೆಡಿಎಸ್​ನಲ್ಲಿ ನಡೆಯುತ್ತಿರುವ ಟಿಕೆಟ್ ಫೈಟ್ ಇನ್ನೂ ಸಹ ಕಗ್ಗಂಟಾಗಿಯೇ ಉಳಿದಿದೆ. ಹಾಸನ ಕ್ಷೇತ್ರದ ಟಿಕೆಟ್‌ಗಾಗಿ ಭವಾನಿ ರೇವಣ್ಣ ಮತ್ತು ಸ್ಪರೂಪ್‌ ಮಧ್ಯೆ ಫೈಟ್‌ ನಡೆಯುತ್ತಿದ್ದು, ಟಿಕೆಟ್‌ ಘೋಷಣೆಯಾಗದಿದ್ರೂ ಆಕಾಂಕ್ಷಿಗಳಿಂದ ಹಾಸನದಾದ್ಯಂತ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಈಗಾಗಲೇ ಭವಾನಿ ರೇವಣ್ಣ ಕ್ಷೇತ್ರದಲ್ಲಿ ಪ್ರಚಾರ ಮಾಡ್ತಿದ್ದು, ಇತ್ತ ಸ್ವರೂಪ್ ಕೂಡ ಕ್ಷೇತ್ರದಲ್ಲಿ ಅಬ್ಬರದ ಕ್ಯಾಂಪೇನ್‌ ಮಾಡುತ್ತಿದ್ದಾರೆ. ಇಂದು ಹಾಸನಾಂಬೆ ದೇಗುಲದಲ್ಲಿ ಪೂಜೆ ಸಲ್ಲಿಸಿದ ಸ್ವರೂಪ್ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಸ್ವರೂಪ್ ಪರ ಘೋಷಣೆ ಕೂಗಿ ಬೆಂಬಲಿಗರು ಬೆಂಬಲ ಸೂಚಿಸುತ್ತಿದ್ದಾರೆ. ಇದರ ಮಧ್ಯೆ ಜೆಡಿಎಸ್ ದಳಪತಿ ಯಾರಿಗೆ ಟಿಕೆಟ್ ಘೋಷಿಸುತ್ತಾರೆಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ