Swathy Case, ಇದೇ ಸ್ಥಿತಿ ಸಿಎಂ, ಡಿಸಿಎಂ ಮಕ್ಕಳಿಗೆ ಆಗುತ್ತಿದ್ದರೆ ಏನ್ ಮಾಡ್ತಾ ಇದ್ರೂ: ಈಶ್ವರಪ್ಪ

Sampriya

ಮಂಗಳವಾರ, 18 ಮಾರ್ಚ್ 2025 (15:45 IST)
Photo Courtesy X
ಶಿವಮೊಗ್ಗ: ಲವ್‌ ಜಿಹಾದ್‌ ಮೂಲಕ ಪ್ರೀತಿ ಮಾಡುವರನ್ನು ಗುಂಡಿಕ್ಕಿ ಕೊಲ್ಲುವಂತಹ ಕಾನೂನನ್ನು ಸರ್ಕಾರ ತರಬೇಕು. ಸಿದ್ದರಾಮಯ್ಯಗೆ ಮಗಳಿದ್ದು, ಈ ರೀತಿ ಆಗುತ್ತಿದ್ದರೆ ಏನು ಮಾಡುತ್ತಿದ್ದರು. ಡಿಸಿಎಂ, ಗೃಹ ಸಚಿವರ ಮಗಳಿಗೆ ಈ ಪರಿಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದರು ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯಲ್ಲಿ ಸ್ವಾತಿ ಎನ್ನುವ ಯುವತಿಯ ಕೊಲೆ ಲವ್‌ ಜಿಹಾದ್‌ ಮೂಲಕ ಆಗಿದೆ. ಪ್ರೀತಿಯ ಬಲೆಯಲ್ಲಿ ಬೀಳಿಸಿ ಕೊಲೆ ಮಾಡಿದ್ದಾರೆ. ಈ ಘಟನೆ ಬಗ್ಗೆ ಗೃಹ ಸಚಿವರಾಗಲಿ, ಮುಖ್ಯಮಂತ್ರಿ ಆಗಲಿ ಖಂಡನೆ ಮಾಡದಿರುವುದು ದುರದೃಷ್ಟಕರ ಎಂದು ಆಕ್ರೋಶ ಹೊರಹಾಕಿದರು.

ಸ್ವಾತಿ ಬ್ಯಾಡಗಿ ಅವರ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ ಮಲಗಿದ್ದಾರೆ. ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗೆ ಇದುವರೆಗೂ ವರದಿ ನೀಡಿಲ್ಲ. ಈ ಪ್ರಕರಣದಲ್ಲಿ ಬೇಜವಾಬ್ದಾರಿಯಾಗಿ ವರ್ತಿಸಿದ ಅಧಿಕಾರಿಗತಳ ವಿರುದ್ಧವೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ