ಗೃಹ ಜ್ಯೋತಿ ಯೋಜನೆಗೆ ಮೊದಲ ದಿನವೇ ತಾಂತ್ರಿಕ ದೋಷ

ಭಾನುವಾರ, 18 ಜೂನ್ 2023 (18:38 IST)
ರಾಜ್ಯ ಸರ್ಕಾರದ ಗೃಹ ಜ್ಯೋತಿ ಗ್ಯಾರಂಟಿ ಯೋಜನೆಯಲ್ಲಿ  ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುವ ಈ ಮಹತ್ವಾಕಾಂಕ್ಷಿ ಯೋಜನೆಯು  ಜೂನ್‌ 15ರಿಂದಲೇ ಆರಂಭವಾಗಬೇಕಾಗಿತ್ತು. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದ ಅದು ಮುಂದೆ ಹೋಗಿತ್ತು. ಇದೀಗ ಜೂನ್‌ 18ರಿಂದ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.ಅದರಂತೆ ಇಂದು ಆರಂಭದಲ್ಲೇ ಅರ್ಜಿ ಸಲ್ಲಿಸಿಬಿಡೋಣ ಎಂಬ ತರಾತುರಿಯಲ್ಲಿ ಬೆಂಗಳೂರು ಒನ್‌, ಎಸ್ಕಾಂ ಕಚೇರಿಗಳಿಗೆ ಜನ ಬೆಳಗ್ಗೆಯೇ ಬಂದು ನಿಂತಿದ್ದರು.ಕೆಲವು ಕಡೆ 11 ಗಂಟೆಗೆ ಅರ್ಜಿ ಸಲ್ಲಿಕೆ ವ್ಯವಸ್ಥೆ ಆರಂಭ ಮಾಡಿದರೆ, ಇನ್ನು ಕೆಲವು ಕಡೆ ಮಧ್ಯಾಹ್ನ ಒಂದು ಗಂಟೆಯಾದರು ಒಪನ್ ಆಗದ ಆಪ್ಲೀಕೇಷನ್ ನಾಲ್ಕು ಗಂಟೆಯಾದರು ಕೂಡ ತಾಂತ್ರಿಕ ದೋಷ ಇದೆ  ಎಂದು ಸಬೂಬು ಹೇಳಲಾಗುತ್ತು.

ವೆಬ್ದುನಿಯಾವನ್ನು ಓದಿ