ಹೆಣ್ಣೊಪ್ಪಿಸುವ ವೇಳೆ ಅಳುತ್ತಿದ್ದ ಪತ್ನಿಗೆ ಮುತ್ತಿಕ್ಕಿ ಸಮಾಧಾನ ಮಾಡಿದ ತೇಜಸ್ವಿ ಸೂರ್ಯ, ವಿಡಿಯೋ

Sampriya

ಮಂಗಳವಾರ, 11 ಮಾರ್ಚ್ 2025 (17:53 IST)
Photo Courtesy X
ಸಂಸದ ತೇಜಸ್ವಿ ಸೂರ್ಯ ಹಾಗೂ ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರ ವಿವಾಹವು ಕುಟುಂಬಸ್ಥರ, ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಇನ್ನೂ ಆರತಕ್ಷತೆಯಲ್ಲಿ ರಾಜ್ಯದ ಸಿಎಂ ಸೇರಿದಂತೆ ಕೇಂದ್ರದ ಸಚಿವರುಗಳು ಪಾಲ್ಗೊಂಡು ನವ ವಧು ವರರಿಗೆ ಹಾರೈಸಿದರು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಸ್ಕಂದಕುಮಾರ್ ಅವರ ತುಂಬಾ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೆಣ್ಣು ಒಪ್ಪಿಸೋ ಶಾಸ್ತ್ರದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ತೇಜಸ್ವಿ ಸೂರ್ಯ ಅವರ ಮಡಿಲಿನಲ್ಲಿ ಕೂರಿಸಿ, ನಂತರ ತೇಜಸ್ವಿ ಮಡಿಲಿಗೆ ಶಿವಶ್ರೀಯನ್ನು ತಂದೆ ತಾಯಿ ಮಗಳನ್ನು ಒಪ್ಪಿಸುತ್ತಾರೆ.  ಈ ವೇಳೆ ಅಳುತ್ತಿದ್ದ ಹೆಂಡತಿಯ ಕೆನ್ನೆಗೆ ಮುತ್ತಿಟ್ಟು ಸಮಾಧಾನ ಮಾಡುತ್ತಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
 
 
 
 
View this post on Instagram
 
 
 
 
 
 
 
 
 
 
 

A post shared by Anveshane (@anveshane__)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ