ಮೈಸೂರು ರಸ್ತೆಯಲ್ಲಿರುವ ವಿದ್ಯುತ್ ಚಿತಾಗಾರ ತಾತ್ಕಾಲಿಕ ಸ್ಥಗಿತ

ಶುಕ್ರವಾರ, 6 ಅಕ್ಟೋಬರ್ 2023 (13:46 IST)
ಪಾಲಿಕೆಯ ಪಶ್ಚಿಮ ವಲಯ ವ್ಯಾಪ್ತಿಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಟ್ರಾನ್ಸ್ ಫಾರ್ಮರ್ ಸಮಸ್ಯೆ ಉಂಟಾಗಿದೆ.ಟ್ರಾನ್ಸ್ ಫಾರ್ಮರ್ ದುರಸ್ಥಿಯಾಗೋವರೆಗೂ ಚಿತ್ತಾಗಾರ ಸ್ಥಗಿತವಾಗಲಿದೆ. ತುರ್ತು ಕೆಲಸಗಳನ್ನು ಕೈಗೊಳ್ಳಬೇಕಾಗಿರುವುದರಿಂದ 15 ದಿನಗಳಕಾಲ ಅಂದ್ರೆ 5 ನೇತಾರೀಕಿನಿಂದ ಅ.21 ರವರೆಗೆ 15 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ.ಸ್ಥಗಿತಗೊಳಿಸಿರುವ ಕಾರಣ ಬೇರೆಡೆಗೆ ಮೃತ ದೇಹದ ದಹನ ಕ್ರಿಯೆ ಮಾಡುವಂತೆ ಮನವಿಮಾಡಲಾಗಿದೆ.
 
 ವಿಲ್ಸನ್ ಗಾರ್ಡನ್, ಹರಿಚ್ಚಂದ್ರ ಘಾಟ್ ಚಿತಾಗಾರವನ್ನು ಉಪಯೋಗಿಸಬಹುದೆಂದು ಸೂಚನೆ ನೀಡಲಾಗಿದೆ.
ಮಕಾರ್ಯಪಾಲಕ ಅಭಿಯಂತರರು ವಿದ್ಯುತ್-ಪಶ್ಚಿಮ ವಲಯ ಅಧಿಕಾರಿ ಆನಂದ್ ರಿಂದ ಪ್ರಕಟಣೆ ಹೊರಡಿಸಲಾಗಿದೆ.
15 ದಿನಗಳಕಾಲ ಚಿತ್ತಾಗಾರ ಸ್ಥಗಿತಗೊಳಿಸಿದ್ದು,ಹರೀಶ್ ಚಂದ್ರ ಘಾಟ್ ನಲ್ಲಿ ದಹನ ಕ್ರಿಯೆ ಮಾಡುವಂತೆ ಕಾರ್ಯಪಾಲಕ ಅಭಿಯಂತರ ಆನಂದ್ ಸೂಚನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ