ಭಯೋತ್ಪಾದನಾ ಫ್ಯಾಕ್ಟರಿ ಮಟ್ಟ ಹಾಕುತ್ತೇವೆ– ರಾಮಲಿಂಗಾರೆಡ್ಡಿ
ಬುಧವಾರ, 14 ಫೆಬ್ರವರಿ 2018 (19:56 IST)
ಕರಾವಳಿ ಭಾಗದಲ್ಲಿ ಎರಡು ಭಯೋತ್ಪಾದನಾ ಫ್ಯಾಕ್ಟರಿಗಳಿವೆ ಸಮಯ ಸಿಕ್ಕರೆ ಅವುಗಳನ್ನು ಮಟ್ಟ ಹಾಕುತ್ತೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿನ ಭಯೋತ್ಪಾದನೆ ಸಂಘಟನೆಗಳನ್ನು ಮಟ್ಟ ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ, ಅದಕ್ಕೆ ಸರಿಯಾದ ಸಮಯ ಸಿಕ್ಕಿಲ್ಲ. ಆದರೂ ಕೂಡ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಿಜೆಪಿಯವರು ಸತ್ತವರ ಮನೆಗೆ ಮರಣೋತ್ತರ ಸದಸ್ಯತ್ವ ನೀಡುತ್ತಾರೆ. ಬದುಕಿರುವವರನ್ನು ಸೇರಿಸಿಕೊಂಡು 23 ಹಿಂದೂಗಳ ಕೊಲೆಯಾಗಿದೆ ಎಂದು ಅವರು ಸುಳ್ಳು ಹೇಳಿದ್ದಾರೆ ಎಂದು ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.