ರಾಜ್ಯದಲ್ಲಿ ಉಗ್ರರ ಭೀತಿ : ಹೋಂ ಮಿನಿಸ್ಟರ್ ಸಿಡಿಸಿದ್ರು ಹೊಸ ಬಾಂಬ್

ಬುಧವಾರ, 16 ಅಕ್ಟೋಬರ್ 2019 (16:33 IST)
ರಾಜ್ಯದಲ್ಲಿ ಈಗಾಗಲೇ ಇರೋ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ವ್ಯವಸ್ಥೆ ಬಗ್ಗೆ ಹೋಂ ಮಿನಿಸ್ಟರ್ ಹೇಳಿಕೆ ನೀಡಿದ್ದಾರೆ.

ಎಟಿಎಸ್ ವ್ಯವಸ್ಥೆ ಇರೋದನ್ನು ಸದೃಢಗೊಳಿಸುವ ಕಾರ್ಯ ಆಗುತ್ತಿದೆ. ಹೀಗಂತ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರು ನಗರಕ್ಕೆ ಉಗ್ರರ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಸಿಮೀತವಾಗಿ ನವೆಂಬರ್ 1 ರಿಂದ  ಭಯೋತ್ಪಾದನಾ ನಿಗ್ರಹ ದಳ ಆರಂಭಿಸಲಾಗುವುದು. ‘ಉಗ್ರರು ಬೆಂಗಳೂರಿನಲ್ಲಿ 20 ರಿಂದ 22 ಅಡುಗುತಾಣಗಳನ್ನು ಮಾಡಿಕೊಂಡಿದ್ದಾರೆ ಎನ್ನುವ ಎನ್‌ ಐ ಎ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಬೆಂಗಳೂರಿನ ಜನಸಂಖ್ಯೆ ನೋಡಿಕೊಂಡು ಎಟಿಎಸ್ ಸದೃಢಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಬೆಂಗಳೂರು, ಮೈಸೂರು, ಮಂಗಳೂರುನಲ್ಲೂ ಎಟಿಎಸ್  ಈಗಾಗಲೇ ಜಾರಿಯಲ್ಲಿದ್ದು,  ಎಟಿಎಸ್ ಗೆ ಸಮರ್ಥವಾದ ಅನುಭವಾದ ಅನುಭವ ಹೊಂದಿರುವ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ಅಲ್ಲದೇ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗೆ ಬೇಕಾದ ತಂತ್ರಜ್ಞಾನ ತಿಳುವಳಿಕೆ ಹೊಂದಿರುವ ಸಿಬ್ಬಂದಿ ಒದಗಿಸಲಾಗುವುದು ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ