ಔರಾದಕರ್ ವರದಿ ಶೀಘ್ರ ಜಾರಿ ಎಂದ ಗೃಹ ಸಚಿವ

ಭಾನುವಾರ, 29 ಸೆಪ್ಟಂಬರ್ 2019 (18:31 IST)
ರಾಘವೇಂದ್ರ ಔರಾದಕರ್ ವರದಿ ಜಾರಿ ಕುರಿತಂತೆ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ವರದಿಯನ್ನು ಎರಡು ಹಂತಗಳಲ್ಲಿ ವರದಿ ಜಾರಿಗೆ ತರಲಾಗುವುದು.

ಹೀಗಂತ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೊಲೀಸ ಕಮೀಷನರ್ ಕಚೇರಿಯಲ್ಲಿ ನಡೆದ ಹು-ಧಾ ಪೋಲಿಸ ಕಮೀಷನರೇಟ್ ಹಾಗೂ ಧಾರವಾಡ ಜಿಲ್ಲಾ ವ್ಯಾಪ್ತಿಯ ಪ್ರಗತಿ ಪರಿಶೀಲನಾ ಸಭೆಯ ಮುನ್ನ ಮಾತನಾಡಿದ್ರು. ಹಣಕಾಸು ಇಲಾಖೆಯ ಅನುಮತಿ ನೀಡಿದ ಕೂಡಲೇ, ಮುಂದಿನ ಪ್ರಕ್ರಿಯೆ ನಡೆಸಲಾಗುವುದು ಎಂದ್ರು.

ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚನೆ : ಅವಳಿನಗರದಲ್ಲಿ ಇತ್ತಿಚೆಗೆ ಶೂಟೌಟ್, ಚಾಕು ಇರಿತ ಪ್ರಕರಣಗಳು ಹೆಚ್ಚಾಗುತ್ತಿದ್ದು,  ಈ ಬಗ್ಗೆ ಪೊಲೀಸ ಅಧಿಕಾರಿಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಾಕೀತು ಮಾಡಲಾಗಿದೆ.

ಅಲ್ಲದೇ ನಗರದಲ್ಲಿ ನೆಲಸಿರುವ ಹೊರ ರಾಜ್ಯದವರ ಮೇಲೆ ಗಮನ ಹರಿಸಬೇಕು. ಅಲ್ಲದೇ ಹುಬ್ಬಳ್ಳಿಗೆ ಗೋವಾ, ಮಹಾರಾಷ್ಟ್ರ ರಾಜ್ಯಗಳು ಹತ್ತಿರ ವಿರುವ ಕಾರಣ ಅಪರಾಧಗಳನ್ನು ಮಾಡಿ ಓಡಿ ಹೋಗಲು ಅನುಕೂಲ ಆಗುತ್ತಿದೆ. ಹೀಗಾಗಿ ಗೋವಾ, ಮಹಾರಾಷ್ಟ್ರ ರಾಜ್ಯಗಳ ಪೊಲೀಸ ಇಲಾಖೆಯ ಜೊತೆಗೆ ಸೂಕ್ತ ಸಂಯೋಜನೆ ಹೊಂದಲು ಚಿಂತನೆ ನಡೆದಿದೆ ಎಂದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ