ಗ್ರಾಹಕರ ಗಮನ ಬೇರೆಡೆ ಸೆಳೆದು ಹಣ ಕಳ್ಳತನ ಮಾಡುತ್ತಿದ್ದವರ ಬಂಧನ
ಭಾನುವಾರ, 12 ಆಗಸ್ಟ್ 2018 (16:59 IST)
ಗ್ರಾಹಕರ ಗಮನ ಬೇರೆಡೆ ಸೆಳೆದು ಹಣ ಎಗರಿಸುತ್ತಿದ್ದ ಓಜಿ ಕುಪ್ಪಂ ಗ್ಯಾಂಗ್ ನ ಇಬ್ಬರನ್ನು ಬಂಧಿಸಲಾಗಿದೆ. ಬ್ಯಾಂಕ್ ಬಳಿ ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದ ಗ್ರಾಹಕರ ಗಮನ ಬೇರೆಡೆ ಸೆಳೆದು ಹಣ ಎಗರಿಸುತ್ತಿದ್ದ ಖದೀಮರನ್ನು ದೊಡ್ಡಬಳ್ಳಾಪುರ ಪೊಲೀಸರ ಕಾರ್ಯಾಚರಣೆ ವೇಳೆ ಬಂಧನ ಮಾಡಲಾಗಿದೆ.
ಕಳೆದ ಮೇ 29 ರಂದು ದೊಡ್ಡಬಳ್ಳಾಪುರ ನಗರದ ಬ್ಯಾಂಕ್ ಆಫ್ ಇಂಡಿಯಾ ಬಳಿ ಮಂಜುನಾಥ್ ಎಂಬುವರ ಗಮನ ಬೇರೆಡೆ ಸೆಳೆದು 12 ಲಕ್ಷ ಎಗರಿಸಿ ಪರಾರಿಯಾಗಿದ್ದ ಖಧೀಮರು ಸಿಕ್ಕಿಬಿದ್ದಿದ್ದಾರೆ. ಪ್ರಕರಣ ಬೆನ್ನತಿದ ಪೊಲೀಸರಿಂದ ಆಂಧ್ರದ ಒಜಿಕುಪ್ಪಂ ನ ಶರವಣ್ ಮತ್ತು ವೆಂಕಟೇಶ್ ಎನ್ನೋ ಖತರ್ನಾಕ್ ಗ್ಯಾಂಗ್ ನ ಇಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದೆ.
ಬೆಂಗಳೂರು ಸೇರಿದಂತೆ ಅಂತರಾಜ್ಯಗಳಲ್ಲಿಯೂ ಇದೇ ರೀತಿ ಗ್ರಾಹಕರ ಗಮನ ಬೇರೆಡೆ ಸೆಳೆದು ಹಣ ಎಗರಿಸುವಲ್ಲಿ ನಿಪುಣವಾಗಿರೂ ಗ್ಯಾಂಗ್ನ ಸದಸ್ಯರು ಇವರಾಗಿದ್ದಾರೆ.
5 ಜನ ತಂಡದ ಗ್ಯಾಂಗ್ ನಲ್ಲಿ ಇಬ್ಬರ ಬಂಧನವಾಗಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ. ಒಂದು ತಿಂಗಳಲ್ಲೆ ಪ್ರಕರಣ ಬೇಧಿಸಿ ಕಳುವಾಗಿದ್ದ 9 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.