ಬಿಬಿಎಂಪಿಯ ಮಹಾ ಎಡವಟ್ಟಿನಿಂದ ವಾಹನಸವಾರರಲ್ಲಿ ನಡುಕ

ಬುಧವಾರ, 24 ಆಗಸ್ಟ್ 2022 (19:35 IST)
ಶಿವನಂದ ಸರ್ಕಲ್ ನಲ್ಲಿ 40 ಕೋಟಿ ಖರ್ಚಿನಲ್ಲಿ ನಿರ್ಮಾಣವಾದ ಉಕ್ಕಿನ ಸೇತುವೆ ಬಗ್ಗೆ ಆರಂಭದಲ್ಲೇ ಅಪಸ್ವರ ಶುರುವಾಗಿದೆ.ಭಾರಿ ವಾಹನಗಳು ಸೇತುವೆ ಮೇಲೆ ಹೋಗುವಾಗ ಕೇಳಿಸುತ್ತಿದೆ ಎದೆ ಝಲ್ ಎನಿಸುವ ಶಬ್ಧ. ಬಿಬಿಎಂಪಿ ಅಧಿಕಾರಿಗಳ ಮತ್ತೊಂದು ಮಹಾ ಯಡವಟ್ಟು ಕಾಮಗಾರಿ ಈಗ ಬಯಲಾಗಿದೆ.ಚೊಚ್ಚಲ ಸ್ಟೀಲ್ ಬ್ರಿಡ್ಜ್ ಗೆ ಇದೀಗ  ಮಹಾಕಂಟಕ ಎದುರಾಗಿದೆ....
 
ಆರಂಭದಲ್ಲೇ ಬಿಬಿಎಂಪಿ  ಮೇಲೆ ಕಳಪೆ ಕಾಮಗಾರಿ ಆರೋಪ ಕೇಳಿಬರುತ್ತಿದೆ.ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ಟೀಲ್ ಬ್ರಿಡ್ಜ್  ವಾಹನ ಓಡಾಟಕ್ಕೆ ಯೋಗ್ಯವಲ್ಲವಾ.!?ಅನ್ನುವ ಪ್ರಶ್ನೆ ಶುರುವಾಗಿದೆ.ಪ್ರಾಯೋಗಿಕ ಸಂಚಾರದಲ್ಲೇ  ಬಿಬಿಎಂಪಿ ಕಳಪೆ ಕಾಮಗಾರಿ ಬಯಲಾಯ್ತು.ಆಗಸ್ಟ್ 15ರಂದು ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಅವಕಾಶವನ್ನ ಪಾಲಿಕೆ ಮಾಡಿಕೊಟ್ಟಿದೆ.ಉಕ್ಕಿನ ಸೇತುವೆಯ ಒಂದು ಪ್ರಾಯೋಗಿಕ ಸಂಚಾರದಲ್ಲೇ ಬಿಬಿಎಂಪಿ ಕಳಪೆ ಕಾಮಗಾರಿ ಈಗ ಬಟಾಬಯಲಾಗಿದೆ.
 
ಭಾರಿ ವಾಹನಗಳ ಸಂಚಾರದ ವೇಳೆ ಸ್ಟೀಲ್ ಬ್ರಿಡ್ಜ್ ಶೇಕ್ ಆಗ್ತಿದೆ.ದೊಡ್ಡ ಮಟ್ಟದ ಶಬ್ದ ಬರ್ತಿದೆ.ಒಂದೇ ಸಮನೆ ವಾಹನ ಸಂಚಾರ ಮಾಡಿದ್ರೆ ಸಾಕು ಸ್ಟೀಲ್ ಬ್ರಿಡ್ಜ್ ಫುಲ್ ವೈಬ್ರೇಟ್ ಆಗುತ್ತೆ.ಈ ಮೂಲಕ ಬಿಬಿಎಂಪಿಯ ಸ್ಟೀಲ್ ಬ್ರೀಜ್  ಕಾಮಗಾರಿ ಕಳಪೆ ಎಂಬುದು ಸಾಬೀತಾಗಿದೆ.ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಸಾಲು ಸಾಲು ಕಂಪ್ಲೇಟ್ ಹೋಗಿದೆ.ಕೇವಲ ವೈಬ್ರೇಷನ್ ಅಲ್ಲ. ರಸ್ತೆ ತುಂಬಾ ಉಬ್ಬು ನಿರ್ಮಾಣ ಎಂದು ಜನರು ಕಿಡಿಕಾರುತ್ತಿದ್ದಾರೆ.
 
ಇನ್ನು ಇತ್ತ ಆಸ್ಫಾಲ್ಟ್ ಮಾಡುವ ವೇಳೆ ರಸ್ತೆ ಉಬ್ಬಾಗಿರುವ ಬಗ್ಗೆ ಬಿಬಿಎಂಪಿ ಸ್ಪಷ್ಟೀಕರಣ ನೀಡಿದೆ.
 
 ಪರ ವಿರೋಧಗಳ ನಡುವೆ ಇನ್ನೇನು ಸೆಪ್ಟೆಂಬರ್ ಮೊದಲ ವಾರದಲ್ಲಿ ಸ್ಟೀಲ್ ಬ್ರೀಡ್ಜ್ ನ್ನ ಸಿಎಂ ಉದ್ಘಾಟನೆ ಮಾಡುವ ಸಾಧ್ಯತೆ ಇತ್ತು.ಆದ್ರೆ ಅಷ್ಟರಲ್ಲಿ ಸ್ಟೀಲ್ ಬ್ರೀಜ್ ನ್ನ ಎಡವಟ್ಟು ಬಯಲಾಗಿದೆ.ಈ ಬಗ್ಗೆ  ಪಬ್ಲಿಕ್ ನೆಕ್ಸ್ಟ್ ಗೆ ಬಿಬಿಎಂಪಿ ಚೀಫ್ ಇಂಜಿನಿಯರ್ ಲೋಕೇಶ್ ಮಾಹಿತಿ ನೀಡಿದ್ದಾರೆ.ನಾವು ಪ್ರಾಯೋಗಿಕವಾಗಿ ಉಕ್ಕಿನ ಸೇತುವೆಯ ಒಂದು ರಸ್ತೆ ಓಪನ್ ಮಾಡಿದ್ದೇವೆ.ರಸ್ತೆ ಉಬ್ಬು, ಶೇಕ್ ಮತ್ತು ವೈಬ್ರೇಷನ್ ಬಗ್ಗೆ ಸಾರ್ವಜನಿಕರು ಕಂಪ್ಲೇಟ್ ಮಾಡುತ್ತಿದ್ದಾರೆ.ಘನ ವಾಹನಗಳು ಹೋಗುವಾಗ ವೈಬ್ರೇಷನ್ ಆಗುತ್ತಿದೆ.ಅದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ.ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ.ಇವೆಲ್ಲವನ್ನೂ ಪತ್ತೆ ಹಚ್ಚಲೆಂದೇ ನಾವು ಪ್ರಾಯೋಗಿಕ ಸಂಚಾರಕ್ಕೆ ಓಪನ್ ಮಾಡಿದ್ದೇವೆ ಎಂಬುದಾಗಿ ಲೋಕೇಶ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ