ಪ್ರಿಯಕರನ ತೋಟದಲ್ಲಿ ಪ್ರಾಣ ಬಿಟ್ಟ ಪ್ರೇಯಸಿ
ತೇಜಸ್ವಿನಿ ಎಂಬಾಕೆ ಸಾದಿಕ್ ಎಂಬಾತನ ಜೊತೆ ಮೂರು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದಳು. ಇದೀಗ ಮದುವೆಯಾಗುವ ವಿಚಾರ ಮಾತನಾಡಲು ಇಬ್ಬರೂ ಸಾದಿಕ್ ನ ತೋಟದಲ್ಲಿ ಭೇಟಿಯಾಗಿದ್ದರು. ಸುಮಾರು ಎರಡು ಗಂಟೆಗಳ ಕಾಲ ಇಬ್ಬರೂ ಮಾತುಕತೆ ನಡೆಸಿದ್ದಾರೆ.
ಬಳಿಕ ಸಾದಿಕ್ ತನ್ನ ಮನೆಗೆ ತೆರಳಿದ್ದಾನೆ. ವಾಪಸ್ ಬಂದು ನೋಡಿದಾಗ ತೇಜಸ್ವಿನಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಳಿಕ ಸಾದಿಕ್ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.