ಮಾಡುವ ವಿಧಾನ:
ಮೊದಲು ಶೇಂಗಾವನ್ನು ಸಣ್ಣ ಉರಿಯಲ್ಲಿ ಗರಿ ಗರಿಯಾಗಿ ಹುರಿದುಕೊಳ್ಳಬೇಕು. ಆದರ ಬಿಸಿ ಆರಿದ ಮೇಲೆ ಅದರ ಮೇಲಿನ ತೆಳುವಾದ ಸಿಪ್ಪೆಯನ್ನು ತೆಗೆಯಬೇಕು. ನಂತರ ಅರ್ಧ ಶೇಂಗಾವನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಒಂದು ಸುತ್ತು ತಿರುಗಿಸಬೇಕು ಅಂದರೆ ಶೇಂಗಾ 2 ರಿಂದ 3 ಚೂರು ಆಗಬೇಕು ಅಷ್ಟೇ. ಉಳಿದದ್ದನ್ನು ಹಾಗೆಯೇ ಸೇರಿಸಬೇಕು. ನಂತರ ದಪ್ಪ ತಳದ ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಸಕ್ಕರೆಯನ್ನು ಹಾಕಿ 1/2 ಚಮಚ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಅದು ಕರಗಿ ಸಕ್ಕರೆಯೂ ಪೂರ್ತಿಯಾಗಿ ಕರಗಿದ ಮೇಲೆ ಅದರ ಪಾಕವು ಹೊಂಬಣ್ಣಕ್ಕೆ ತಿರುಗುತ್ತದೆ.
ನಂತರ ಶೇಂಗಾವನ್ನು ಹಾಕಿ ಚೆನ್ನಾಗಿ ಕಲೆಸಬೇಕು. ನಂತರ ಒಂದು ಸ್ವಚ್ಛವಾದ ಕಲ್ಲಿನ ಮೇಲೆ (ಪ್ಲೇಟಿನಲ್ಲಿ ಈ ಮಿಶ್ರಣವನ್ನು ಹರವಬಾರದು. ಏಕೆಂದರೆ ಅದನ್ನು ಪ್ಲೇಟಿನಿಂದ ತೆಗೆಯುವುದು ತುಂಬಾ ಕಷ್ಟಕರ) ತುಪ್ಪವನ್ನು ಸವರಿ ಈ ಮಿಶ್ರಣವನ್ನು ಅದರ ಮೇಲೆ ಹಾಕಿ ಲಟ್ಟಣಿಗೆಯಿಂದ ಅದನ್ನು ಲಟ್ಟಿಸಿ ಅದು ಪೂರ್ತಿಯಾಗಿ ಬಿಸಿ ಆರುವುದರೊಳಗಾಗಿ ಚಾಕುವಿನಿಂದ ಹಲ್ವದ ತರಹ ಕತ್ತರಿಸಿದರೆ ರುಚಿ ರುಚಿಯಾದ ಶೇಂಗಾ ಬರ್ಫಿ ಸವಿಯಲು ಸಿದ್ಧ.