2014 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಯನಗರದ ಸಿದ್ದಾಪುರ ಬಡಾವಣೆಯಲ್ಲಿ 200 ಕೋಟಿ ರೂಪಾಯಿ ಮೌಲ್ಯದ2 ಎಕರೆ 39 ಗುಂಟೆ ಜಮೀನನ್ನು ಅಶೋಕ್ ಧಾರಿವಾಲಾ ಕಂಪೆನಿಗೆ ಡಿನೋಟಿಫೈ ಮಾಡಿ ನೀಡಿದ್ದಾರೆ ಎಂದು ಆರೋಪಿಸಿ ಸಿದ್ದರಾಮಯ್ಯ ನಡೆಸಿರುವ ಭೂ ಹಗರಣದ ಕುರಿತ ದಾಖಲೆಗಳನ್ನು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಬಿಡುಗಡೆ ಮಾಡಿದ್ದಾರೆ.