ಜಾಮೀನು ಪಡೆದು ಹೊರ ಬಂದ ತಕ್ಷಣ ಜನಾರ್ಧನ ರೆಡ್ಡಿ ಹೇಳಿದ್ದೇನು?

ಗುರುವಾರ, 15 ನವೆಂಬರ್ 2018 (09:38 IST)
ಬೆಂಗಳೂರು: ಆಂಬಿಡೆಂಟ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಜನಾರ್ಧನ ರೆಡ್ಡಿ ಜಾಮೀನು ಪಡೆದು ನಿನ್ನೆ ಹೊರ ಬಂದ ತಕ್ಷಣ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಡುಗಡೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜನಾರ್ಧನ ರೆಡ್ಡಿ ‘ಮುಖ್ಯಮಂತ್ರಿ ಕುಮಾರಸ್ವಾಮಿ ನನ್ನ ವಿರುದ್ಧ ಹನ್ನೆರಡು ವರ್ಷಗಳ ಧ್ವೇಷ ಸಾಧಿಸಿ ಜೈಲಿಗೆ ಕಳುಹಿಸಿ ವಿಚಿತ್ರ ಆನಂದ ಅನುಭವಿಸಿದ್ದಾರೆ’ ಎಂದು ಜನಾರ್ಧನ ರೆಡ್ಡಿ ಆರೋಪಿಸಿದ್ದಾರೆ.

ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಹಾಗಿದ್ದರೂ ಒಂದು ದಿನದ ಮಟ್ಟಿಗಾದರೂ ರೆಡ್ಡಿಯನ್ನು ಜೈಲಿಗೆ ಕಳುಹಿಸಬೇಕು ಎಂದು ಅವರು ಲೆಕ್ಕಾಚಾರ ಹಾಕಿದ್ದರು. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ. ನನಗೂ ಒಂದು ಕಾಲ ಬಂದೇ ಬರುತ್ತದೆ. ಆಗ ನೋಡಿಕೊಳ್ಳುವೆ ಎಂದು ಜನಾರ್ಧನ ರೆಡ್ಡಿ ಕತ್ತಿ ಮಸೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ