ಸದನದಲ್ಲಿ ಕೋಲಾಹಲ ಸೃಷ್ಟಿಸಿದ ಬಿಜೆಪಿ: ಕಲಾಪ ನಾಳೆಗೆ ಮುಂದೂಡಿಕೆ
ಗುರುವಾರ, 7 ಫೆಬ್ರವರಿ 2019 (14:39 IST)
ಮೊದಲ ದಿನದ ನಂತರ ಮತ್ತೆ ಎರಡನೇ ದಿನವೂ ಸದನದಲ್ಲಿ ಬಿಜೆಪಿ ಕೋಲಾಹಲ ಸೃಷ್ಟಿಸಿದೆ.
ಗದ್ದಲ, ಕೋಲಾಹಲಕ್ಕೆ ಸದನದ ಎರಡನೇ ದಿನದ ಕಲಾಪ ಬಲಿಯಾಗಿದೆ. ಮೊದಲ ದಿನವೇ ಸಿಎಂ ಸ್ಥಾನದಿಂದ ಕುಮಾರಸ್ವಾಮಿ ಕೆಳಗೆ ಇಳಿಯಬೇಕು ಎಂದಿದ್ದ ಬಿಜೆಪಿ ನಾಯಕರು, ಎರಡನೇ ದಿನವೂ ಧರಣಿ ಮುಂದುವರಿಸಿದರು. ಸುಗಮ ಕಲಾಪಕ್ಕೆ ಅವಕಾಶ ನಿರ್ಮಾಣವಾಗದ ಕಾರಣ ನಾಳೆಗೆ ಸದನ ಮುಂದೂಡಲಾಯಿತು.