ಜೀವದ ಹಂಗು ತೊರೆದು 8 ಜನರ ರಕ್ಷಿಸಿದ ಧೈರ್ಯವಂತ

ಶುಕ್ರವಾರ, 3 ಜುಲೈ 2020 (17:38 IST)
ತನ್ನ ಜೀವದ ಹಂಗು ತೊರೆದು ಅಪಾಯದಲ್ಲಿ ಸಿಲುಕಿದ್ದ ಜನರನ್ನು ವ್ಯಕ್ತಿಯೊಬ್ಬ ರಕ್ಷಣೆ ಮಾಡಿದ್ದಾನೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬಿಬ್ಬಳ್ಳಿಯಲ್ಲಿ ಕಾಗಿಣಾ ನದಿ ತುಂಬಿ ಹರಿಯುತ್ತಿದೆ. ಭಾರೀ ಮಳೆ ನೀರಿನಿಂದಾಗಿ ನಡುಗಡ್ಡೆಯಲ್ಲಿ  8 ಕೃಷಿ ಕಾರ್ಮಿಕರು, ರೈತರು ಸಿಲುಕಿದ್ದರು.

ಶರಣು ಎಂಬಾತ ಮೀನುಗಾರರ ಜೊತೆಗೂಡಿ ರಕ್ಷಣೆ ಕಾರ್ಯಾಚರಣೆ ನಡೆಸಿದ್ದಾರೆ. ಅಗ್ನಿ ಶಾಮಕ ಇಲಾಖೆಯವರೂ ಸಾಥ್ ನೀಡಿದರು. ಐವರು ಮೀನುಗಾರರ ತಂಡವು 8 ಜನರ ಜೀವ ಉಳಿಸುವಲ್ಲಿ ಸಫಲವಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ