ಮಹಿಳಾ ಮೀನುಗಾರರಿಗೆ ಬ್ಯಾಂಕ್ ಸಾಲ
ಮಹಿಳಾ ಮೀನುಗಾರರಿಗೆ ಸಾಲ ನೀಡಲು ಬ್ಯಾಂಕ್‌ಗಳು ಆದ್ಯತೆ ನೀಡಬೇಕು.
ಮಹಿಳೆಯರಿಗೆ ಬ್ಯಾಂಕ್ ಸಾಲ ನೀಡಿದಲ್ಲಿ ಸೂಕ್ತ ಕಾಲದಲ್ಲಿ ಮರು ಪಾವತಿಯಾಗುವುದರಿಂದ ಮಹಿಳಾ ಮೀನುಗಾರರಿಗೆ ಸಾಲ ನೀಡಲು ಆದ್ಯತೆ ನೀಡಬೇಕು. ಈ ಮಹಿಳೆಯರು 50 ಸಾವಿರದವರೆಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಲ್ಲಿ ಬ್ಯಾಂಕುಗಳು ಮಾರ್ಜಿನ್ ವಿಧಿಸದೇ ಸಾಲ ನೀಡಬೇಕು ಎಂದಿದ್ದಾರೆ.
ಮೀನುಗಾರಿಕಾ ಬೋಟ್ ಖರೀದಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮೀನುಗಾರರಿಗೆ 2 ಲಕ್ಷದವರೆಗೆ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡುವ ಕಾರ್ಯವಾಗಬೇಕು. ಜಿಲ್ಲೆಯಲ್ಲಿ ಮೀನುಗಾರರಿಗೆ ಕಿಸಾನ್ ಕಾರ್ಡ್ ವಿತರಣೆ ಪ್ರಗತಿದಾಯಕವಾಗಿರುವುದಿಲ್ಲ. ಮುಂದಿನ 2 ತಿಂಗಳೊಳಗಾಗಿ ಕಿಸಾನ್ ಕಾರ್ಡ್ ವಿತರಿಸುವ ಕಾರ್ಯವಾಗಬೇಕು ಎಂದಿದ್ದಾರೆ.