ತಾಳಿ ಕಟ್ಟೋ ವೇಳೆ ಹಸೆಮಣೆಯಿಂದ ಎದ್ದ ವಧು : ಮದುವೆ ಕೊನೆ ಕ್ಷಣದಲ್ಲಿ ಮದುವೆ ಬೇಡ ಎನ್ನಲು ಕಾರಣವಾದ್ರು ಏನು?

ಸೋಮವಾರ, 28 ಆಗಸ್ಟ್ 2023 (12:26 IST)
ತುಮಕೂರು : ತಾಳಿ ಕಟ್ಟುವ ವೇಳೆ ಬಂದಾಗ ವಧು ಹಸೆಮಣೆಯಿಂದ ಎದ್ದಿದ್ದು, ಬಳಿಕ ಮದುವೆಯೇ ಕ್ಯಾನ್ಸಲ್ ಆಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಸುಮಾ (ಹೆಸರು ಬದಲಿಸಲಾಗಿದೆ) ಮದುವೆ ಬೇಡ ಎಂದು ಹಸೆಮಣೆಯಿಂದ ಮೇಲೆದ್ದ ವಧು. ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದ ಹಿನ್ನೆಲೆ ಯುವತಿ ಮದುವೆಯನ್ನು ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಮಾಡಿದ್ದಾಳೆ.

ಕಳೆದ ರಾತ್ರಿ ನಡೆದ ರಿಸೆಪ್ಶನ್ನಲ್ಲಿ ಯುವತಿ ನಗುತ್ತಲೇ ಫೋಟೋಗಳಿಗೆ ಪೋಸ್ ನೀಡಿದ್ದಳು. ಆದರೆ ಬೆಳಗ್ಗೆ ಮದುವೆಯ ಮುಹೂರ್ತ ಹತ್ತಿರವಾಗುತ್ತಲೇ ಮದುವೆ ಬೇಡ ಎಂದಿದ್ದಾಳೆ. ವಧು ಉಲ್ಟಾ ಹೊಡೆಯುತ್ತಲೇ ಕಲ್ಯಾಣ ಮಂಟಪದಲ್ಲಿ ಗದ್ದಲ ಏರ್ಪಟ್ಟಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ