ಸಮಂತಾಗೆ ಎರಡನೇ ಮದುವೆ ಯೋಗ! ಭವಿಷ್ಯ ನುಡಿದ ಜ್ಯೋತಿಷಿ ವೇಣುಸ್ವಾಮಿ

ಭಾನುವಾರ, 27 ಆಗಸ್ಟ್ 2023 (06:40 IST)
ಹೈದರಾಬಾದ್: ಟಾಲಿವುಡ್ ಸ್ಟಾರ್ ನಟರ ವೃತ್ತಿ, ವೈಯಕ್ತಿಕ ಬದುಕಿನ ಬಗ್ಗೆ ಕರಾರುವಾಕ್ ಆಗಿ ಭವಿಷ್ಯ ನುಡಿಯುವ ಜ್ಯೋತಿಷಿ ವೇಣುಸ್ವಾಮಿ ನಟಿ ಸಮಂತಾ ಋತು ಪ್ರಭುಗೆ ಎರಡನೇ ಮದುವೆ ಯೋಗವಿದೆ ಎಂದಿದ್ದ ವಿಡಿಯೋವೊಂದು ಈಗ ವೈರಲ್ ಆಗಿದೆ.

ಸಮಂತಾ ಮತ್ತು ನಾಗಚೈತನ್ಯ ಪ್ರೀತಿಸಿ ಮದುವೆಯಾಗಿ ಬಳಿಕ ವಿಚ್ಛೇದನ ಪಡೆದಿದ್ದರು. ಇವರ ವಿಚ್ಛೇದನದ ಬಗ್ಗೆಯೂ ಸ್ವಾಮೀಜಿ ಮೊದಲೇ ಭವಿಷ್ಯ ನುಡಿದಿದ್ದರು.

ಇದೀಗ ಸಮಂತಾ ಮತ್ತು ನಾಗಚೈತನ್ಯ ಮುಂದೆ ಎರಡನೇ ಮದುವೆಯಾಗಲಿದ್ದಾರೆ ಎಂದು ಹೇಳಿರುವ ವಿಡಿಯೋ ತುಣುಕು ವೈರಲ್ ಆಗಿದೆ. ನಾಗಚೈತನ್ಯ ಮಾತ್ರವಲ್ಲ, ಅವರ ಸಹೋದರ ಕೂಡಾ ಮುಂದೆ ಮದುವೆಯಾಗಿ ವಿಚ್ಛೇದನ ಪಡೆಯಲಿದ್ದಾರೆ ಎಂದು ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ